25 ದಿನದತ್ತ `ಹೊಂದಿಸಿ ಬರೆಯಿರಿ` ಸಕ್ಸಸ್ ಫುಲ್ ಪಯಣ - ಸಂಭ್ರಮ ಹಂಚಿಕೊಂಡ ಚಿತ್ರತಂಡ
Posted date: 02 Thu, Mar 2023 05:18:20 PM
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣದ `ಹೊಂದಿಸಿ ಬರೆಯಿರಿ` ಸಿನಿಮಾ ತೆರೆಕಂಡು 25ದಿನದ ಸಂಭ್ರಮದಲ್ಲಿದೆ. ಫೆಬ್ರವರಿ 10ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಇನ್ನಷ್ಟು ಜನರನ್ನು ತಲುಪುತ್ತಿರುವ ಈ ಸಿನಿಮಾ ಹೌಸ್ ಫುಲ್ ಶೋಗಳೊಂದಿಗೆ, ಜನರ ಅಪಾರ ಪ್ರೀತಿಯೊಂದಿಗೆ 25 ದಿನಗಳನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಇದೇ ಸಂಭ್ರಮದಲ್ಲಿ ಚಿತ್ರತಂಡ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರನ್ನು ಎದುರುಗೊಂಡು ಸಂತಸ ಹಂಚಿಕೊಂಡಿದೆ. 

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ `ಹೊಂದಿಸಿ ಬರೆಯಿರಿ` ಸಿನಿಮಾ ತಂಡದ ಬಾಂದವ್ಯ ಮೂರು ವರ್ಷದ್ದು, ಇದೀಗ ಸಿನಿಮಾ ಬಿಡುಗಡೆಯಾಗಿ 25ದಿನ ಪೂರೈಸುತ್ತಿದೆ. ಫೆಬ್ರವರಿ 10ರಂದು ಸಿನಿಮಾ ಬಿಡುಗಡೆಯಾಗಿತ್ತು. ಆರಂಭದಲ್ಲಿ 70 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ನಾಲ್ಕು ವಾರದಲ್ಲಿ 40 ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳಲ್ಲಿ ನಮ್ಮ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಚಿತ್ರಮಂದಿರಕ್ಕೂ ಭೇಟಿ ಕೊಟ್ಟಿದ್ದೇವೆ. ಸಿನಿಮಾ ನೋಡಿ ಜನರು ಹೇಳುತ್ತಿದ್ದ ಪಾಸಿಟಿವ್ ಮಾತುಗಳು ಸಿನಿಮಾವನ್ನು ಮತ್ತಷ್ಟು ಪ್ರಮೋಟ್ ಮಾಡುವಂತೆ ಮಾಡಿತು. ಸಿನಿಮಾ 25 ದಿನಗಳನ್ನು ಪೂರೈಸುತ್ತಿರುವ ಈ ಸಮಯದಲ್ಲಿ ಕುಶಾಲ ನಗರ,ಕೆ.ಆರ್.ಪೇಟೆ, ಶಿವಮೊಗ್ಗ ಸೇರಿದಂತೆ ತಾಲೂಕು ಸೆಂಟರ್ ಗಳಿಗೂ ಸಿನಿಮಾವನ್ನು ತಲುಪಿಸುತ್ತಿದ್ದೇವೆ. ಚಿತ್ರಮಂದಿರದ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡ್ರು. 

ನಟ ಪ್ರವೀಣ್ ತೇಜ್ ಮಾತನಾಡಿ 25 ದಿನ ಸೆಲೆಬ್ರೇಟ್ ಮಾಡಲು ಪ್ರಮುಖ ಕಾರಣ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರು. ನಿಮ್ಮ ಸಹಕಾರ ದೊಡ್ಡದು. ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ಕೂಡ ಸಿನಿಮಾ ನೋಡಿ ಇಷ್ಟಪಟ್ರು. ಅವರ ಬಿಡುವಿಲ್ಲದ ಕೆಲಸದ ನಡುವೆಯೂ ನಮ್ಮ ಸಿನಿಮಾವನ್ನು ವೀಕ್ಷಣೆ ಮಾಡಿದ್ರು. ಸಿನಿಮಾ ನೋಡಿ ಮೆಚ್ಚಿಕೊಂಡ್ರು. ಸಿನಿಮಾದಲ್ಲಿ ತೋರಿಸಲಾದ ಮಂತ್ರಮಾಂಗಲ್ಯದ ಬಗ್ಗೆ ಕೂಡ ಮಾತನಾಡಿದ್ರು ಎಂದು ಪ್ರವೀಣ್ ತೇಜ್ ಸಿನಿಮಾ ಯಶಸ್ಸಿನ ಸಂತಸ ಹಂಚಿಕೊಂಡ್ರು.

ನಟಿ ಭಾವನ ರಾವ್ ಮಾತನಾಡಿ ಈ ಸಿನಿಮಾ ತುಂಬಾ ಪ್ರೀತಿಯಿಂದ ಮಾಡಿರುವ ಸಿನಿಮಾ. ಅಷ್ಟೇ ಪ್ರೀತಿಯನ್ನು ಜನರು ತೋರಿಸಿದ್ದಾರೆ. ನಾವೆಲ್ಲರು ಮೂರು ವರ್ಷದಿಂದ ಈ ಸಿನಿಮಾದ ಜೊತೆಯಾಗಿದ್ದೇವೆ. ಆದ್ರೆ ನಿರ್ದೇಶಕ ಜಗನ್ನಾಥ್ ಸರ್ ನಾಲ್ಕೈದು ವರ್ಷದಿಂದ ಸಿನಿಮಾ ಕೆಲಸದಲ್ಲಿ ತೊಡಗಿದ್ದಾರೆ. ಅವರ ಪ್ಯಾಶನ್ ನೋಡಿ ತುಂಬಾ ಖುಷಿ ಆಗುತ್ತೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ 25 ದಿನಗಳನ್ನು ಪೂರೈಸುತ್ತಿದ್ದೇವೆ. ಇನ್ನಷ್ಟು ಪ್ರೋತ್ಸಾಹ ಬೇಕು ಎಂದು ಸಂತಸ ಹಂಚಿಕೊಂಡ್ರು. 

ಐಶಾನಿ ಶೆಟ್ಟಿ ಮಾತನಾಡಿ ನಿರ್ದೇಶಕ ಜಗನ್ನಾಥ್ ತುಂಬಾ ಶ್ರಮ ಹಾಕಿದ್ದಾರೆ. ಸಿನಿಮಾ ಬಿಡುಗಡೆಯಾದ ಮೇಲೂ ಅದನ್ನು ಜನರಿಗೆ ತಲುಪಿಸಲು ಅವರು ಸಖತ್ ಎಫರ್ಟ್ ಹಾಕಿದ್ದಾರೆ. ಸಿನಿಮಾ ಬಗ್ಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ಕೇಳಿ ಬರ್ತಿದೆ. ಸಿನಿಮಾದ ಹಾಡು, ಸಂಭಾಷಣೆ, ಸಾಹಿತ್ಯ ಪ್ರತಿಯೊಂದರ ಬಗ್ಗೆ ಜನ ಮಾತನಾಡುತ್ತಿದ್ದಾರೆ. ನಿರ್ದೇಶಕರ ಫಸ್ಟ್ ಸಿನಿಮಾ ಎಂದು ಎನಿಸುವುದಿಲ್ಲ ಎಂದು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಇದೀಗ 25ದಿನಗಳನ್ನು ಸಿನಿಮಾ ಪೂರೈಸುತ್ತಿದೆ ತುಂಬಾ ಖುಷಿಯಾಗುತ್ತಿದೆ. ಇನ್ನಷ್ಟು ಸಹಕಾರ ಬೇಕು ಎಂದು ಸಂತಸ ಹಂಚಿಕೊಂಡ್ರು. 

ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು `ಹೊಂದಿಸಿ ಬರೆಯಿರಿ` ಸಿನಿಮಾ ನಿರ್ಮಾಣ ಮಾಡಿದ್ದು, ಜೋ ಕೋಸ್ಟ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed