ಕಿಸ್‌ ಮನಸುಗಳಿಗೆ ಆಪ್ತವಾಗುತ್ತದೆ -4/5 ****
Posted date: 28 Sat, Sep 2019 02:43:44 PM

ಕಿಸ್  ಇದೊಂದು ಕುಟುಂಬ ಸಮೇತ ನೋಡಬಹುದಾದ ಸಿನಿಮಾವೆಂದು ಮೊದಲ ಸ್ಪಷ್ಟಪಡಿಸಲಾಗಿದೆ. ಈ ಪದ ಪ್ರೀತಿ ಮಾಡುವವರಿಗೆ, ಪ್ರೀತಿಸಿ ಮದುವೆ ಆದವರಿಗೆ ಇದು ಅಮೂಲ್ಯವಾದ ಕೊಡುಗೆ.ಇಂತಹ ಕಿಸ್ ಗಾಗಿ ಒದ್ದಾಡುವಯುವ ಪ್ರೀತಿಕತೆಯೇ ಇದಾಗಿದೆ. ಹಾಗಂತ ಶೀರ್ಷಿಕೆ ಹೆಚ್ಚು ದೃಶ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವಳು ಕಾರಿಗೆಕಲ್ಲುಒಡೆದು ರಿಪೇರಿ ಮಾಡಿಸಲು ದುಡ್ಡು ಇಲ್ಲದ ಕಾರಣ ಅವನಿಗೆ ಸಹಾಯಕಳಾಗಿ 72 ದಿವಸ ಇರುವಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಇಷ್ಟರಲ್ಲಿ ಇಬ್ಬರಲ್ಲೂ ಜಗಳ, ಆತನ ಧೋರಣೆಯಿಂದ ಅನುಭವಿಸುವ ತೊಂದರೆಗಳು ಒಂದು ಹಂತದಲ್ಲಿ ಅವಳನ್ನು ಕಾಪಾಡಿದಾಗ ಕೋಪ ಪ್ರೀತಿಗೆ ವಾಲುತ್ತದೆ.ಇಷ್ಟರಲ್ಲಿ ತನ್ನ ಲವ್ ಹೇಳಿಕೊಳ್ಳಲು ಆತನ ಬಳಿಗೆ ಬಂದಾಗ ಇಂದಿನಿಂದ ನೀನು ಫ್ರಿಬರ್ಡ್, ನಮ್ಮಿಬ್ಬರ ಅಗ್ರಿಮೆಂಟ್ ಮುಗಿದಿದೆ.ನೋಯಿಸಿದ್ದರೆ ಕ್ಷಮಿಸು ಎಂದು ಹೇಳುತ್ತಾನೆ. ಅಲ್ಲಿಗೆ ವಿರಾಮ ಬರುತ್ತದೆ. ಮುಂದೇನು ಎಂಬುದನ್ನ ಸಿನಿಮಾ ನೋಡಬೇಕು.

ಸದಭಿರುಚಿಯ ನಿರ್ದೇಶಕ ಎ.ಪಿ.ಅರ್ಜುನ್  ಸಾಕಷ್ಟು ಗ್ಯಾಪ್‌ ತೆಗೆದುಕೊಂಡು ಉತ್ತಮ ಲವ್‌ಸ್ಟೋರಿಯನ್ನು ನೀಡಿದ್ದಾರೆ. ಪ್ರತಿಯೊಂದು ದೃಶ್ಯವು ಶ್ರೀಮಂತವಾಗಿ ಮೂಡಿಬಂದಿದೆ.ಕೆಲವೊಮ್ಮೆ ತೆಲುಗು ಚಿತ್ರ ನೋಡಿದಂತೆ ಭಾಸವಾಗುತ್ತದೆ.ನಾಯಕ ವಿರಾಟ್‌ ಡ್ಯಾನ್ಸ್, ಫೈಟ್ ಮತ್ತು ಅಭಿನಯದಲ್ಲಿ ಸೈ ಅನಿಸಿಕೊಂಡಿದ್ದಾರೆ. ಇವರಿಗೆ ಸರಿಸಾಟಿಯಾಗಿ ನಾಯಕಿ ಶ್ರೀಲೀಲಾ ಮುದ್ದಾಗಿ ನಟನೆ ಮಾಡುತ್ತಾ ಇಂದಿನ ಹುಡುಗಿಯರನ್ನು ಪ್ರತಿಪಾದಿಸಿದ್ದಾರೆ.ಇಬ್ಬರದು ಹೊಸ ಪ್ರಯತ್ನಎಂದು ಹೇಳುವ ಆಗಿಲ್ಲ. ಭವಿಷ್ಯದಲ್ಲಿ ಕಲಾವಿದರಾಗಿ ನಿಂತರೂ ಅಚ್ಚರಿಯಿಲ್ಲ. ಎಂದಿನಂತೆ ಗೆಳಯನಾಗಿ ಚಿಕ್ಕಣ್ಣ  ಹೆಚ್ಚು ಕಾಣಿಸಿಕೊಂಡು ಅಲ್ಲಲ್ಲಿ ನಗಿಸುತ್ತಾರೆ.

ಸಾಧುಕೋಕಿಲ, ಅವಿನಾಶ್, ಸುಂದರ್ ಹಾಗೆ ಬಂದು ಹೋಗುತ್ತಾರೆ. ವಿ.ಹರಿಕೃಷ್ಣ ಪುತ್ರ  ಆದಿಹರಿಕೃಷ್ಣ ಸಂಗೀತ ಸಂಯೋಜಿಸಿರುವ ನೀನೇ ಮೊದಲು ಗೀತೆಯು ನೋಡಲು,ಕೇಳಲು ಇಂಪಾಗಿದೆ.  ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್‌ ಅಂದರೆ ವಿ.ಹರಿಕೃಷ್ಣ ಹಾಡುಗಳು, ಅರ್ಜುನ್‌ ಶೆಟ್ಟಿ ಛಾಯಾಗ್ರಹಣ, ರವಿವರ್ಮ ಸಾಹಸ  ಎನ್ನುಬಹುದು.  ಈ ಚಿತ್ರದ ಮೂಲಕ ನಿರ್ಮಾಪಕರಾಗಿರುವ ಎ.ಪಿ.ಅರ್ಜುನ್ ಪ್ರಥಮಅನುಭವದಲ್ಲೆ ಮತ್ತೋಂದು ಚಿತ್ರಕ್ಕೆ ಬಂಡವಾಳ ಹೂಡಲು ಕಿಸ್‌ ಧೈರ್ಯತುಂಬಿದೆ.

-4/5 ****

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿಸ್‌ ಮನಸುಗಳಿಗೆ ಆಪ್ತವಾಗುತ್ತದೆ -4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.