ಗೋಧ್ರಾ ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ
Posted date: 17 Sat, Oct 2020 04:13:20 PM

ಈಗ ಕೋವಿಡ್ ಅನ್ಲಾಕ್ ಪ್ರಕ್ರಿಯೆಯು ಜಾರಿಯಲ್ಲಿರುವುದರಿಂದ ಮತ್ತು ಥಿಯೇಟರ್ ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ನಮ್ಮ ಚಲನಚಿತ್ರದ ಚಟುವಟಿಕೆಗಳನ್ನು ಪುನರಾರಂಭಿಸಲು ನಾವು ನಿರ್ಧರಿಸಿದ್ದೇವೆ.

ನಾವು ಇತ್ತೀಚೆಗೆ ನಮ್ಮ ಸಿನಿಮಾವನ್ನು ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಯಿಂದ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಮಂಡಳಿಯ ಸದಸ್ಯರು ನಮ್ಮ ಚಲನಚಿತ್ರವನ್ನು ವೀಕ್ಷಿಸಿದರು ಮತ್ತು ನಮ್ಮ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ. ಮಂಡಳಿಯ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಮತ್ತು ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂದವು. ನೇರ ನಿಷ್ಠುರ ವಿಷಯಗಳು ಕೆಲವೊಮ್ಮೆ ಕಹಿಯಾಗಿರುತ್ತವೆ.  ಗೋಧ್ರಾದಲ್ಲಿ ನಡೆದ ಘಟನೆಗೂ ಮತ್ತು ನಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎಂದು ಮನವಿ ಮಾಡಿದರೂ, ಆ ಕುರಿತು ಅವರಿಗೆ ತಿಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದೆವು. ಆದರೆ, ನಮ್ಮ ಮನವಿಯನ್ನು ಅವರು ಪುರಸ್ಕರಿಸಲಿಲ್ಲ. ಹಾಗಾಗಿ ಸೆನ್ಸಾರ್ ಸಿಬಿಎಫ್ ಸಿ ಅಧಿಕಾರಿಗಳ ಜತೆ ಚರ್ಚಿಸಿ ನಮ್ಮ ಚಿತ್ರದ ಶೀರ್ಷಿಕೆಯನ್ನು ಗೋಧ್ರಾನ್‍ ಎಂದು ಬದಲಾಯಿಸಲು ತೀರ್ಮಾನ ತಗೆದುಕೊಂಡಿದ್ದೇವೆ.

ಆದರೆ, ನಮ್ಮ ಚಿತ್ರತಂಡಕ್ಕೊಂದು ಅನುಮಾನ ಎದುರಾಗಿದೆ. ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ‘ಗೋಧ್ರಾ’ ಎಂದು ನಮ್ಮ ಚಿತ್ರಕ್ಕೆ ಹೆಸರಿಡಲು ಅನುಮತಿ ಪಡೆದಿದ್ದೇವೆ. ಈ ಅನುಮೋದಿತ ಮತ್ತು ನೋಂದಾಯಿಸಿದ ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸಿಬಿಎಫ್‌ಸಿಯಿಂದ ಈಗ ನಮಗೆ ತಿಳಿದು ಆಘಾತವಾಯಿತು. ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಆಶ್ಚರ್ಯವಾಯಿತು.

ಗೋಧ್ರಾ ಎಂಬ ಶೀರ್ಷೀಕೆಯು ಆ ಸ್ಥಳದಲ್ಲಿ ನಡೆದ ಘಟನೆಗೆ ಸಂಬಂಧಿಸಿಲ್ಲ ಎಂಬ ಭರವಸೆಯನ್ನು ನಾವು ಕೆಎಫ್‌ಸಿಸಿಗೆ ನೀಡಿದ್ದೆವು. ಸಿನಿಮಾವನ್ನು ಅದೇ ರೀತಿಯಲ್ಲೇKannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಧ್ರಾ ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ - Chitratara.com
Copyright 2009 chitratara.com Reproduction is forbidden unless authorized. All rights reserved.