``ಪೌಡರ್`` ಘಮ ಘಮ ಶುರು!! ರಾಜ್ಯದಾದ್ಯಂತ ``ಪೌಡರ್``ಬಿಡುಗಡೆ
Posted date: 23 Fri, Aug 2024 05:15:05 PM
ಬಹು ನಿರೀಕ್ಷಿತ ಹಾಸ್ಯ ಚಟಾಕಿ ಚಿತ್ರ "ಪೌಡರ್" ಇಂದು ಬಿಡುಗಡೆಗೊಂಡಿದೆ. ತನ್ನ ವಿಭಿನ್ನವಾದ ಕಥಾಹಂದರದ ಮೂಲಕ ಎಲ್ಲರ ಮನೆ ಮಾತಾಗಿ, ಎಲ್ಲರಲ್ಲಿ‌ ಕುತೂಹಲ ಮೂಡಿಸಿದ್ದ ಈ ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿ ಬಿಡುಗಡೆ ಕಂಡಿದೆ. 

ಇಬ್ಬರು ಯುವಕರು ಒಂದು ನಿಗೂಢವಾದ "ಪೌಡರ್"‌ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ "ಪೌಡರ್".‌ ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? "ಪೌಡರ್"‌ ಹಿಂದಿನ "ಪವರ್"‌ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂದಿನಿಂದ ಚಿತ್ರಮಂದಿರಗಳಲ್ಲಿ ಸಿಗಲಿದೆ. ಈಗಾಗಲೇ ತನ್ನ ಟ್ರೇಲರ್ ಮೂಲಕ ಎಲ್ಲರನ್ನೂ ನಕ್ಕು ನಗಿಸಿದ ಈ‌ ಚಿತ್ರ, ನಗುವನ್ನು ದುಪ್ಪಟ್ಟುಗೊಳಿಸಲು ಇಂದು ಬಿಡುಗಡೆ ಆಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ತನ್ನ ವಿಭಿನ್ನವಾದ ಮಾರ್ಕೆಟಿಂಗ್ ಕೌಶಲ್ಯಗಳ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದ ಪೌಡರ್ ಮಾರ್ಕೆಟಿಂಗ್ ತಂಡಕ್ಕೆ (KRG Connects)  ಚಿತ್ರದ ಬಿಡುಗಡೆ ಮೂಲಕ ಫಲ ದೊರೆತಂತಾಗಿದೆ.

"ಪೌಡರ್" ಒಂದು ಹಾಸ್ಯಭರಿತ ಚಿತ್ರವಾಗಿದ್ದು ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ‌‌. ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಎರಡೂ ಗೀತೆಗಳು "ಮಿಷನ್ ಘಮ ಘಮ" ಮತ್ತು "ಪರಪಂಚ ಘಮ ಘಮ" ಚಿತ್ರಕ್ಕೆ ಇನ್ನಷ್ಟು ಕಳೆ ಕೊಟ್ಟಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ KRG Studios ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ TVF Motion Pictures ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ‌.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed