``ಫಾರೆಸ್ಟ್`` ನಲ್ಲಿ ಜಮ್ಮು - ಕಾಶ್ಮೀರದ ನಟ ಸುನೀಲ್ ಕುಮಾರ್
Posted date: 29 Thu, Aug 2024 06:02:44 PM
ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ  "ಫಾರೆಸ್ಟ್" ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿರುವ ಚಿತ್ರ. "ಫಾರೆಸ್ಟ್" ಹಲವು ವಿಶೇಷಗಳನ್ನೊಳಗೊಂಡ ಚಿತ್ರವೂ ಹೌದು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಜಮ್ಮು - ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಕುಮಾರ್ ಅವರನ್ನು ಅಲ್ಲಿನವರು "ದಿ ಗ್ರೇಟ್ ಕಲಿ ಆಫ್ ಜಮ್ಮು" ಎಂದು ಕರೆಯುತ್ತಾರೆ. ಬಾಲಿವುಡ್ ನ "ಸ್ಟ್ರೀ 2" ಚಿತ್ರದಲ್ಲಿ ಸರ್ಕಟ ಎಂಬ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಯಶ್ ಅಭಿನಯದ ಚಿತ್ರದಲ್ಲಿ ನಟಿಸುವ ಮಾತುಕತೆ ಕೂಡ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸುನೀಲ್ ಕುಮಾರ್ ಹೇಳಿಕೊಂಡಿದ್ದಾರೆ. ಪ್ರಸ್ತುತ "ಫಾರೆಸ್ಟ್" ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌‌‌.‌ ಏಳು ದಿನಗಳ ಕಾಲ ಸಾಹಸ ನಿರ್ದೆಶಕ ರವಿವರ್ಮ ಅವರ ಸಾಹಾಸ ಸಂಯೋಜನೆಯಲ್ಲಿ "ಫಾರೆಸ್ಟ್" ನಲ್ಲೇ ನಡೆದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಸುನೀಲ್ ಕುಮಾರ್ ಭಾಗವಹಿಸಿದ್ದರು. ಅತೀ ಎತ್ತರವಿರುವ ಕಾರಣ ತೆರೆದ ಜೀಪ್ ನಲ್ಲೇ ಇವರು ಪಯಣಿಸುತ್ತಿದ್ದರು. ವಿಮಾನ ಮುಂತಾದವುಗಳಲ್ಲಿ ಪಯಣಿಸುವಾಗಲೂ ಇವರಿಗೆ ಎರಡು ಟಿಕೇಟ್ ಬುಕ್ ಮಾಡಲಾಗುತ್ತಿತ್ತು ಎಂದು ನಿರ್ದೇಶಕ ಚಂದ್ರಮೋಹನ್ ತಿಳಿಸಿದ್ದಾರೆ.    

 ಎನ್.ಎಂ.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್.ಎಂ. ಕಾಂತರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ವಿಶೇಷ ಒಲವಿರುವ ನಿರ್ಮಾಪಕರು ಯಾವುದೇ ಕೊರತೆ ಬಾರದಂತೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. "ಡಬಲ್ ಇಂಜಿನ್" ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ನಿರ್ದೇಶನ ಮಾಡಿದ್ದಾರೆ. ಚಂದ್ರಮೋಹನ್ ಹಾಗೂ ಸತ್ಯಶೌರ್ಯ ಸಾಗರ್ "ಫಾರೆಸ್ಟ್" ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದು, ಸತ್ಯಶೌರ್ಯ ಸಾಗರ್ ಸಂಭಾಷಣೆ ಬರೆದಿದ್ದಾರೆ.

 ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರು ಪ್ರಮುಖಪಾತ್ರದಲ್ಲಿ  ಅಭಿನಯಿಸಿರುವ ಈ ಮಲ್ಟಿ ಸ್ಟಾರರ್ ಚಿತ್ರದ ಹೆಚ್ಚಿನ ಕಥೆ ಫಾರೆಸ್ಟ್ ನಲ್ಲೇ ನಡೆದಿದೆ.  ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಅಣಿಯಾಗುತ್ತಿದೆ.  
  
 ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. 
     
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದವರು "ಫಾರೆಸ್ಟ್"  ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed