ಆ ವೀರಭದ್ರನ ದಯೆಯಿಂದ ಬಿಡುಗಡೆಗೆ ಸಿದ್ದವಾಗಿರೊ "ಪರಂವಃ" ಚಿತ್ರತಂಡವು `ಕಾಂತಾರ ಶಿವ`ನಲ್ಲಿಗೆ ತೆರಳಿತ್ತು..
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಏಷ್ಯಾದ ಎರಡನೇ ಅತಿದೊಡ್ಡ ಕರಡಿಧಾಮವಾದ
ಗುಡೇಕೋಟೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಭಾಗಿತ್ವದಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನ ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಿಷಭ್ ಶೆಟ್ಟಿಯವರನ್ನು ನಮ್ಮ ಚಿತ್ರತಂಡ ಭೇಟಿಯಾಗಿತ್ತು.ನಮ್ಮ ಚಲನಚಿತ್ರದ ಬಗ್ಗೆ ತಿಳಿದ ಅವರು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು..
ನಿರೂಪಕರಾದ ಅಜಿತ್ ಹನುಮಕ್ಕನವರ್,ಬರಹಗಾರರಾದ ಜೋಗಿ,ಡಿಎಫ್ಒ,ಎಎಫ್ಒ,ರೇಂಜ್ ಆಫಿಸರ್ಸ್,ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು,ಪೊಲೀಸ್ ಇಲಾಖೆಯವರು ಸೇರಿದಂತೆ ಗುಡೇಕೋಟೆಯ ಸಮಸ್ತ ಗ್ರಾಮಸ್ಥರು ನಮ್ಮ ಈ ಪ್ರಯತ್ನಕ್ಕೆ ಶುಭಕೋರಿದರು.
ಜುಲೈ 21 ಶುಕ್ರವಾರ ತೆರೆಕಾಣಲಿರೊ "ಪರಂವಃ" ಚಲನಚಿತ್ರದ ಕುರಿತು ವೇದಿಕೆಯಲ್ಲಿ ಪ್ರೀತಿಯಿಂದ ಮಾತನಾಡಿ,ಹೊಸಬರ ತಂಡವನ್ನು ಪ್ರೋತ್ಸಾಹಿಸಿದ ಮಾನ್ಯ ಕೂಡ್ಲಿಗಿ ಶಾಸಕರಾದ ಡಾ.ಶ್ರೀನಿವಾಸ್ ಹಾಗೂ ಅವರ ಧರ್ಮಪತ್ನಿ ಡಾ.ಪುಷ್ಪರವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು..