``ಶತೃಘ್ನ`` ಬಿರುಸಿನ ಚಿತ್ರೀಕರಣ
Posted date: 24 Fri, Feb 2023 09:28:10 AM
 ದೇಶ ಕಾಯಲು ಒಬ್ಬ ಯೋಧ ಇರುವಂತೆ, ಒಂದು ಕುಟುಂಬದಲ್ಲಿ ಮನೆಯನ್ನು ನೋಡಿಕೊಳ್ಳಲು ಯೋಧ ಇರಲೇಬೇಕೆಂಬ ಸಂದೇಶ ಸಾರುವ ಚಿತ್ರ `ಶತೃಘ್ನ`. ಇದರ ಜತೆಗೆ ಅಣ್ಣ ತಮ್ಮನ ಬಾಂಧವ್ಯ, ಪ್ರೀತಿ, ಕ್ರೈಂ. ಸಮಾಜದಲ್ಲಿ ಕೆಟ್ಟ ಶಕ್ತಿಗಳು ನಿಗ್ರಹ ಮಾಡಬೇಕು. ಒಳ್ಳೇದು ಮಾತ್ರ ಉಳಿಬೇಕು ಎನ್ನುವಂತಹ ಅಂಶಗಳನ್ನು ಒಳಗೊಂಡಿದ್ದು, ಇವೆಲ್ಲಾವನ್ನು ಸಸ್ಪೆನ್ಸ್, ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೈಕ್ ಎ ವಾರಿಯರ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.
 
ತುಮಕೂರು ಉದ್ಯಮಿ ಭರತ್‌ಕುಮಾರ್.ಎಸ್ ಅವರು ಶ್ರೀ ಶಿವಶಕ್ತಿ ಫಿಲಿಂಸ್ ಮುಖಾಂತರ ನಿರ್ಮಾಣ ಹಾಗೂ ಎಸ್‌ಐ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಗಂಗರಾಜುಬಾಬು.ಪಿ.ಆರ್ ಅವರಿಗೆ ಎರಡನೇ ಅವಕಾಶ. ಬಿ.ಆರ್.ಹೇಮಂತ್‌ಕುಮಾರ್ ಸಂಗೀತದಲ್ಲಿ ನಾಲ್ಕು ಹಾಡುಗಳು ಸಿದ್ದಗೊಳ್ಳುತ್ತಿದೆ.
 
ಪುತ್ತೂರು ಮೂಲದ ಆರ್ಯನ್ ನಾಯಕ. ದರ್ಶಿನಿ ಮತ್ತು ಸೋನಂರೈ ನಾಯಕಿಯರು. ಸಿದ್ದಾಂತ, ತತ್ವಗಳನ್ನು ಇಟ್ಟುಕೊಂಡಿರುವ ಪ್ರಾಮಾಣಿಕ ಶಾಸಕನಾಗಿ ಬಲರಾಜವಾಡಿ, ಸೈಕಿಯಾಟ್ರಿಕ್ ವೈದ್ಯರಾಗಿ ಸುಚೇಂದ್ರಪ್ರಸಾದ್, ದಕ್ಷ ಎಸ್‌ಪಿ ಪಾತ್ರದಲ್ಲಿ ಶ್ರೀನಾಥ್‌ವಸಿಷ್ಠ, ಖಳನಾಗಿ ಸಾಗರ್ ಉಳಿದಂತೆ ಲಯಕೋಕಿಲ, ಕಾಮಿಡಿ ಕಿಲಾಡಿಗಳು ಸಂತು, ಶ್ರೀಧರತುಮಕೂರು, ಮಧುಜೀರಿಗೆ, ಮಧುಸೂದನ್, ಸತೀಶ್‌ತುಮಕೂರು, ಲತಾಶಂಕರಿ ಮುಂತಾದವರು ನಟಿಸುತ್ತಿದ್ದಾರೆ. 
 
ಛಾಯಾಗ್ರಹಣ ರವಿ, ಸಾಹಸ ಅಲ್ಟಿಮೇಟ್‌ಶಿವು, ನೃತ್ಯ ಗೌರಿಶಂಕರ್ ಅವರದಾಗಿದೆ. ಬೆಂಗಳೂರು, ಮಂಗಳೂರು, ತುಮಕೂರು, ಸುಳ್ಯ, ಗೋವಾ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಸದ್ಯ ಮೊದಲ ಹಂತದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed