ಹೊಸ ಪ್ರತಿಭೆಗಳು ಸೇರಿಕೊಂಡು ಸಿದ್ದಪಡಿಸಿರುವ ’ಒಂದೊಳ್ಳೆ ಲವ್ ಸ್ಟೋರಿ’ ಚಿತ್ರದ ಹೊಸ ಟ್ರೇಲರ್ ಹಾಗೂ ನಾಯಕಿ ಪರಿಚಯದ ಹಾಡನ್ನು ಅಶ್ವಿನಿಪುನೀತ್‌ರಾಜ್‌ಕುಮಾರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಅನಿವಾಸಿ ಭಾರತೀಯ ಮೈಸೂರಿನ ನಿರಂಜನ್‌ಬಾಬು ಪಿನಕಿನ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿ, ನಾಯಕನ ತಂದೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಶಿವರಾಜ್‌ಕುಮಾರ್ ಟೀಸರ್, ರಮೇಶ್‌ಅರವಿಂದ್ ಮ್ಯೂಸಿಕ್ ಆಲ್ಬಂ ಹೊರತಂದಿದ್ದಾರೆ. ನಿರ್ಮಾಪಕನಿಗೆ ಯಾವುದೇ ನಷ್ಟವಾದರೂ ಪರವಾಗಿಲ್ಲ. ಆದರೆ ಈ ಚಿತ್ರದಿಂದ ಹದಿನಾಲ್ಕು ಹೊಸ ಪ್ರತಿಭೆಗಳು ಹುಟ್ಟಿಕೊಂಡಿದ್ದಾರೆ. ಅವರು ಉಳಿಯಬೇಕೆಂದು ಹೇಳಿದರು.
ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸಿರುವುದು ಅಶ್ವಿನ್. ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿ, ಬಿಗ್‌ಬಾಸ್ ಮನೆಗೆ ಹೋಗಿ ಬಂದಿರುವ ಧನುಶ್ರೀ ಮತ್ತು ಗೆಳತಿಯಾಗಿ ನಟಿಸಿರುವ ನಿಶಾಹೆಗಡೆ ನಾಯಕಿಯರು. ಉಳಿದಂತೆ ಗೆಳೆಯನಾಗಿ ಕೈಲಾಸ್‌ಪಾಲ್, ಕೆಎಸ್‌ಜಿ.ವೆಂಕಟೇಶ್,ವಿಂಧುಜ, ಮಲ್ಲುಜಮಖಂಡಿ, ಮಮತಾ ಮುಂತಾದವರು ಅಭಿನಯಿಸಿದ್ದಾರೆ.
ಯೌವನಕ್ಕೆ ಬಂದು ಬದುಕು ಏನು ಎಂಬುದನ್ನು ಅರಿತುಕೊಳ್ಳುವಾಗ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ನಮ್ಮ ಪಯಣ ಏನು ಬೇಕಾದರೂ ಆಗಬಹುದು. ಕೊನೆಗೆ ವಿಷಯಗಳನ್ನು ತಿಳಿದುಕೊಂಡಾಗ ಪ್ರತಿಯೊಬ್ಬರಿಗೂ ಹೌದು ಅನಿಸುತ್ತದೆ. ಹಾಗೆಯೇ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಅವನು ಪ್ರೀತಿಯಲ್ಲಿ ಮೋಸ ಹೋದರೆ, ಅವಳು ಜೀವನದಲ್ಲಿ ನಂಬಿಕೆಯನ್ನು ಕಳೆದುಕೊಂಡಿರುತ್ತಾಳೆ. ಇಬ್ಬರು ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ಇಂತಹ ಆಸಕ್ತಿಕರ ಅಂಶಗಳು ಸಿನಿಮಾದಲ್ಲಿದೆ ಎಂದು ನಿರ್ದೇಶಕ ಪ್ರವೀಣ್‌ಸುತರ್ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
ಏಳು ಹಾಡುಗಳಿಗೆ ಆಕಾಶ್‌ಜಾದವ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋಧ್‌ಮಂಡ್ಯ, ಸಂಭಾಷಣೆ ವಿಜಿಯೇಂದ್ರಜೋಡಿದಾರ್, ಸಂಕಲನ ರಾಜ್‌ಶಿವು ಅವರದಾಗಿದೆ. ಚಿಕ್ಕಮಗಳೂರು, ಮಂಗಳೂರು, ಕೇರಳ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಸಚಿತ್ ಫಿಲಿಂ ಮುಖಾಂತರ ಸಿನಿಮಾವು ಫೆಬ್ರವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.