`ಆದೃಶ್ಯ` ನಾಳೆಯಿಂದ ತೆರೆಗೆ
Posted date: 07 Thu, Nov 2019 09:53:26 AM

ಗುಜ್ಜಲ್ ಪುರುಷೋತ್ತಮ್ ಅರ್ಪಿಸುವ, ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಆದೃಶ್ಯ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶಿವಗಣೇಶ್ ನಿರ್ದೇಶನದ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಡಾ||ವಿ.ನಾಗೇಂದ್ರ-ಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ. ಮೃಗಶಿರ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಹಾಗೂ ಕುಂಫ಼ು ಚಂದ್ರು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸತೀಶ್ ಬಿಲ್ಲಾಡಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಕ್ರೇಜಿಸ್ಟಾರ್ ರವಿಚಂದ್ರನ್, ಅಚ್ಯುತ ಕುಮಾರ್, ನಿಸರ್ಗ ಲಕ್ಷ್ಮಣ್, ಚೈತ್ರಾ ಆಚಾರ್, ಯಶ್ ಶೆಟ್ಟಿ, ಚೇತನ್ ವಿಕ್ಕಿ, ಗಿರೀಶ್ ಅರ್ಜುನ್ ಗೌಡ, ಕಾರ್ತಿಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಆದೃಶ್ಯ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.