`ಐ ಲವ್ ಯೂ` ಚಿತ್ರಕ್ಕೆ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ
Posted date: 10 Wed, Oct 2018 01:40:53 PM

ಬೆಂಗಳೂರಿನ ಹೆಸರುಘಟ್ಟ ಆಚಾರ್ಯ ಕಾಲೇಜಿನಲ್ಲಿ ಖ್ಯಾತ ನಿರ್ದೇಶಕ ಆರ್.ಚಂದ್ರು ನಿರ್ದೇಶನ ಮಾಡಿ ಸಿದ್ದೇಶ್ವರ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಆಭಿನಯದ ಬಹುನಿರೀಕ್ಷೆಯ ಐ ಲವ್ ಯೂ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ತಮಿಳಿನ ಖ್ಯಾತ ಸಾಹಸ ನಿರ್ದೇಶಕ ಗಣೇಶ್ ಮಾರ್ಗದರ್ಶನದಲ್ಲಿ  ಉಪೇಂದ್ರ ಅವರ ಕಾಲೇಜ್ ಕ್ರಿಕೆಟ್‌ನ ರೋಚಕ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.

ಅದ್ದೂರಿ ವೆಚ್ಚದ ಈ ಸಾಹಸ ದೃಶ್ಯಕ್ಕಾಗಿ ಕಾಸ್ಟ್ಲೀ ಕಾರುಗಳನ್ನು ಬಳಸುತ್ತಿರುವ ಸ್ಟಾರ್ ನಿರ್ದೇಶಕ ಆರ್.ಚಂದ್ರು ಹಲವಾರು ಜನ ಕಲಾವಿದರನ್ನು ಈ ಭರ್ಜರಿ ಸಾಹಸ ದೃಶ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಚಿತ್ರೀಕರಣ ಶುರುವಾದಾಗಿನಿಂದಲೂ ತನ್ನ ವೈಶಿಷ್ಟ್ಯಗಳಿಂದ ಗಮನ ಸೆಳೆದಿರುವ ಐ ಲವ್ ಯೂ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ಡಾ.ರವಿವರ್ಮ , ವಿನೋದ್ , ಹಾಗೂ ತಮಿಳಿನ ಫೇಮಸ್  ಸ್ಟಂಟ್ ಮಾಸ್ಟರ್ ಗಣೇಶ್ ಸಾಹಸ ಸಂಯೋಜಿಸಿರೋದು ವಿಶೇಷ.

ಇನ್ನು ಬಹು ಬಾಷಾ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಐ ಲವ್ ಯೂ ಗಾಗಿ ನೃತ್ಯ ನಿರ್ದೇಶನ ಮಾಡಿರೋದು ಈ ಚಿತ್ರದ ಮತ್ತೊಂದು ವಿಶೇಷವಾಗಿದೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಐ ಲವ್ ಯೂ` ಚಿತ್ರಕ್ಕೆ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.