`ಕಟ್ಟುಕಥೆ` ನಾಳೆಯಿಂದ ತೆರೆಗೆ
Posted date: 14 Thu, Jun 2018 09:36:15 AM

 ಅನಘ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸ್ವೀಟ್ಸ್ ಮಹದೇವ ಮೈಸೂರು ಅವರು ನಿರ್ಮಿಸಿರುವ ‘ಕಟ್ಟುಕಥೆ‘ ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎನ್.ಸವಿತ ಈ ಚಿತ್ರದ ಸಹ ನಿರ್ಮಾಪಕರು.   

ರಾಜ್ ಪ್ರವೀಣ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಗುರುಮೂರ್ತಿ ಹೆಗ್ಗಡೆ ಅವರ ಸಂಕಲನವಿರುವ ಈ ಚಿತ್ರಕ್ಕೆ ‘ಟಗರು‘ ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಮಹೇಶ್ ಜೆ ನೆರ್‌ಕರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದ ಹಾಡುಗಳನ್ನು ರಾಜು ನಾಗನಗೌಡ ರಚಿಸಿದ್ದಾರೆ.

ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಕೆಂಪೇಗೌಡ, ಬೃನಾಲಿ ಶೆಟ್ಟಿ, ರಿಹಾಂಸಿ ಗೌಡ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್,  ರಜನಿಕಾಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕಟ್ಟುಕಥೆ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.