`ಕೆಂಪೇಗೌಡ 2` ನಾಳೆಯಿಂದ ತೆರೆಗೆ
Posted date: 08 Thu, Aug 2019 11:12:48 AM

ಪಂಚಮುಖಿ ಹನುಮಾನ್ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಎ.ವಿನೋದ್ ಅವರು ನಿರ್ಮಿಸಿರುವ ‘ಕೆಂಪೇಗೌಡ 2‘ ಚಿತ್ರ ನಾಳೆಯಿಂದ  ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ತೆರೆಗೆ ಬರಲಿದೆ.
ಕೋಮಲ್ ಕುಮಾರ್ ನಾಯಕಾರಾಗಿ ನಟಿಸಿರುವ ಈ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ ಬರೆದಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕೆ.ವಿ.ರಾಜು, ಶ್ರೀನಾಥ್ ಎಂ.ಎಸ್ ಹಾಗೂ ನಂಜುಂಡ ಅವರು ಬರೆದಿದ್ದಾರೆ. ಡಿosh ಮೋಹನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವರುಣ್ ಉನ್ನಿ ಅವರ ಸಂಗೀತ ನಿರ್ದೇಶನವಿದೆ. ಸಿ.ರವಿಚಂದ್ರ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಅಂಬು ಅರಿವು, ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ಶ್ರೀಶಾಂತ್(ಕ್ರಿಕೆಟ್), ಯೋಗಿ(ಲೂಸ್‌ಮಾದ), ರಕ್ಷಿಕ ಶರ್ಮ, ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಮುಂತಾದವರಿದ್ದಾರೆ.Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕೆಂಪೇಗೌಡ 2` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.