`ಕ್ರೇಜಿಲೋಕಕ್ಕೆ` ಡಿ.ಟಿ.ಎಸ್
Posted date: 23 Mon, Jan 2012 ? 08:57:15 AM

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸುತ್ತಿರುವ ‘ಕ್ರೇಜಿಲೋಕ ಚಿತ್ರಕ್ಕೆ ಬಾಲಾಜಿ ರೆಕಾರ್ಡೀಂಗ್ ಸ್ಟುಡಿಯೊದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ.  
     ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.  
     ಕವಿತಾಲಂಕೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ಅಭಿನಯಿಸುತ್ತಿದ್ದಾರೆ. ಭಾರತಿ ವಿಷ್ಣುವರ್ಧನ, ಹರ್ಷಿಕಾ ಪೂಣಚ್ಛ, ಅವಿನಾಶ್, ನೀನಾಸಂ ಅಶ್ವತ್ ಮುಂತಾದವರು ‘ಕ್ರೇಜಿಲೋಕದ ತಾರಾಬಳಗದಲ್ಲಿದ್ದಾರೆ.
     ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ. ಇಮ್ರಾನ್ ನೃತ್ಯ ನಿರ್ದೇಶನ, ಕುಮಾರ್ ಕಲಾ ನಿರ್ದೇಶನ ಹಾಗೂ ರವಿಶಂಕರ್ ನಿರ್ಮಾಣ ನಿರ್ವಹಣೆ ‘ಕ್ರೇಜಿಲೋಕ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕ್ರೇಜಿಲೋಕಕ್ಕೆ` ಡಿ.ಟಿ.ಎಸ್ - Chitratara.com
Copyright 2009 chitratara.com Reproduction is forbidden unless authorized. All rights reserved.