`ತಿರುಗಿಸೋ ಮೀಸೆ` ಚಿತ್ರದ ಶೀರ್ಷಿಕೆ ಬಿಡುಗಡೆ
Posted date: 04 Thu, Jul 2019 08:54:47 AM

ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಜಿ ಹಾಗೂ ರಿಜ್ವಾನ್ ಅವರು ನಿರ್ಮಿಸುತ್ತಿರುವ ‘ತಿರುಗಿಸೋ ಮೀಸೆ‘ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿತು. ಖುಷಿ ಹಾಗೂ ಅಚ್ಯುತ ರಾಮರಾವ್ ಈ ಚಿತ್ರದ ಸಹ ನಿರ್ಮಾಪಕರು.

ಕೃಷ್ಣವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸುರೇಶ್ ಬಾಬ್ಲಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್ ಐ ಡಿ ಅವರ ಛಾಯಾಗ್ರಹಣವಿದೆ. ಧರ್ಮೇಂದ್ರ ಸಂಕಲನ ಹಾಗೂ ಕನಕ ಅವರ ಕಾಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀವಿಷ್ಣು, ನಿಕ್ಕಿ ತಂಬೊಲಿ, ರೋಹಿಣಿ, ಶ್ರೀಕಾಂತ್ ಅಯ್ಯಂಗಾರ್, ಕೆಂಪೇಗೌಡ, ರಾಮರಾವ್, ರವಿವರ್ಮ ಮುಂತಾದವರಿದ್ದಾರೆ. ಮನೋಜ್ ಮಾವಿಲ್ಲ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ತಿರುಗಿಸೋ ಮೀಸೆ` ಚಿತ್ರದ ಶೀರ್ಷಿಕೆ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.