`ನಟಸಾರ್ವಭೌಮ` ನಾಳೆಯಿಂದ
Posted date: 06 Wed, Feb 2019 10:39:17 AM

ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸಿರುವ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ  `ನಟಸಾರ್ವಭೌಮ` ಚಿತ್ರ ನಾಳೆಯಿಂದ  (ಫ಼ೆಭ್ರವರಿ ೭) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಡಿ.ಇಮ್ಮಾನ್ ಅವರ ಸಂಗೀತ ನಿರ್ದೇಶನವಿದೆ. ವೈದಿ ಎಸ್ ಛಾಯಾಗ್ರಹಣ, ಮಹೇಶ್ ರೆಡ್ಡಿ,  ಸಂಕಲನ, ಪೀಟರ್ ಹೆನ್ ಸಾಹಸ ನಿರ್ದೇಶನ, ಜಾನಿ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಭೂಪತಿ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪುನೀತ್ ರಾಜಕುಮಾರ್, ರಚಿತಾರಾಂ, ಅನುಪಮ ಪರಮೇಶ್ವರನ್, ಸಾಧುಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಪ್ರಭಾಕರ್(ಬಾಹುಬಲಿ) ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಟಸಾರ್ವಭೌಮ` ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.