`ನಿಗರ್ವ` ಮಾತಿನ ಜೋಡಣೆ ಮುಕ್ತಾಯ
Posted date: 05 Wed, Jun 2019 09:45:29 AM

ಮುಸುರಿ ಕೃಷ್ಣಮೂರ್ತಿ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ನಿಗರ್ವ‘ ಚಿತ್ರಕ್ಕೆ ಸ್ಕೈಲೇನ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ.  ಚಿತ್ರಕ್ಕೆ ಬೆಂಗಳೂರು, ಹೊನ್ನಾವರದಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ.

ಜಯಸಿಂಹ ಮುಸುರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುದತ್ ಮುಸುರಿ ಅವರ ಛಾಯಾಗ್ರಹಣವಿದೆ. ವಿನು ಮನಸು ಸಂಗೀತ ನಿರ್ದೇಶನ, ನಾಗೇಂದ್ರ ಅರಸ್ ಸಂಕಲನ, ಡ್ಯಾನ್ಸ್ ಕಿಟ್ಟಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಬುಲೆಟ್ ವಿನು, ಕೃಷ್ಣೇಗೌಡ, ಆರ್ಯನ್ ಸೂರ್ಯ ಭಾರತಿ ಹೆಗಡೆ, ಹರ್ಷಿತಾ ಗೌಡ, ರತ್ನಕುಮಾರಿ, ರಂಜಿತಾರಾವ್, ಅಶ್ವಿನಿರಾವ್ ಮುಂತಾದವರು ಈ ಚಿತ್ರದ ತಾರಾಬಲಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಿಗರ್ವ` ಮಾತಿನ ಜೋಡಣೆ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.