`ಬಿಲ್ ಗೇಟ್ಸ` ನಾಳೆಯಿಂದ ತೆರೆಗೆ
Posted date: 06 Thu, Feb 2020 09:10:31 AM

ಬಿಲ್’ಗೇಟ್ಸ್ ಚಿತ್ರ ನಾಳೆಯಿಂದ ತೆರೆಗೆ ಬರುತ್ತಿದೆ. ಬಿಲ್’ಗೇಟ್ಸ್ ಪರಿಪೂರ್ಣ ಮನರಂಜನಾ ಚಿತ್ರ ಅನ್ನೋದು ಟ್ರೇಲರಿನಲ್ಲೇ ಗೊತ್ತಾಗುತ್ತಿದೆ. ಇದು ಕಾಮಿಡಿ, ಸೆಂಟಿಮೆಂಟ್, ಹಾರರ್ ಮತ್ತು ಫ್ಯಾಂಟಸಿ ಸೇರಿದಂತೆ ಹಲವಾರು ಪ್ರಕಾರಗಳನ್ನು ಒಳಗೊಂಡಿರುವ ಚಿತ್ರವಾಗಿದೆ. ಥಿಯೇಟರಿನಲ್ಲಿ ಕುಳಿತ ಜನ ಎದ್ದುಬರೋತನಕ ನಗುತ್ತಲೇ ಇರಬೇಕು ಅನ್ನೋದನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ರೂಪಿಸಿದ್ದಾರೆ.

ಬೃಹತ್ ಸೆಟ್ಟುಗಳು, ಅದ್ಭುತವಾದ ಗ್ರಾಫಿಕ್ಸು, ಎಲ್ಲವನ್ನೂ ಒಳಗೊಂಡಿರುವ ಬಿಲ್’ಗೇಟ್ಸ್ ಚಿತ್ರದಲ್ಲಿ ಕಲಾತ್ಮಕ ಕುಸುರಿ ಎದ್ದುಕಾಣುತ್ತಿದೆ. ನಿರ್ದೇಶಕ ಸಿ. ಶ್ರೀನಿವಾಸ ಸಾಕಷ್ಟು ಕನಸಿಟ್ಟು ಈ ಚಿತ್ರವನ್ನು ರೂಪಿಸಿದ್ದಾರೆ. ಪ್ರತಿಯೊಂದೂ ಹೀಗೇ ಬರಬೇಕು ಅಂತಾ ಹಠ ಹಿಡಿದು, ತಾವಂದುಕೊಂಡಂತೆ ಬರುವ ತನಕ ಬಿಡದೆ ಸಿನಿಮಾವನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಕಟ್ಟಿದ್ದಾರೆ.

ಬಿಲ್ ಗೇಟ್ಸ್ ಸಿನಿಮಾದಲ್ಲಿ ಸರಿಸುಮಾರು ನಲವತ್ತು ನಿಮಿಷಗಳ ಕಾಲ ಫ್ಯಾಂಟಸಿ ಲೋಕ ತೆರೆದುಕೊಳ್ಳಲಿದೆ. ಯಮಲೋಕದ ಸೆಟ್ ರೂಪಿಸಿ ಅದರಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ. ಅತ್ಯಾಧುನಿಕವಾದ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಕೂಡಾ ಇಲ್ಲಿ ಬಳಸಲಾಗಿದೆ ಎಂದು ಸ್ವತಃ ನಿರ್ದೇಶಕ ಶ್ರೀನಿವಾಸ ಹೇಳಿದ್ದಾರೆ.
ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರವನ್ನು ಶ್ರೀನಿವಾಸ ಸಿ. ನಿರ್ದೇಶನ ಮಾಡಿದ್ದಾರೆ. ವಸಂತ್ ಕುಮಾರ್ ಬಿ.ಎಂ., ನಾಗನಹಳ್ಳಿ ಯತೀಶ್, ಅರವಿಂದ್ ಕುಮಾರ್, ಸತ್ಯನಾರಾಯಣ ಎಸ್., ಗಿರೀಶ್ ಬಿ.ಎನ್, ಡಾ. ರಾಧೇಶ್ ಕೆ.ಆರ್., ರಂಗಸ್ವಾಮಿ ಎಂ.ಎ., ಸಿಮೆಂಟ್ ರಾಮಚಂದ್ರ, ಎಲ್ ಆದಿನಾರಾಯಣ ರಮೇಶ್, ಮುನಿಕೃಷ್ಣ, ಎಂ.ವಿ., ಹೆಚ್.ಸಿ.ಕುಮಾರಸ್ವಾಮಿ (ಹಂಚ್ಯಾ), ಕುಮಾರ್ ಬಿ.ಕೆ., ಎನ್.ಎಲ್. ಶಿವಶಂಕರ್, ಅನನ್ಯ, ವಿನಮ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿಕ್ಕಣ್ಣ ಮತ್ತು ಶಿಶಿರ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ರೋಜಾ ಮತ್ತು ಅಕ್ಷರಾ ರೆಡ್ಡಿ ನಾಯಕಿಯರು. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತ, ಪಿ. ಮರಿಸ್ವಾಮಿ ಸಂಕಲನ ಈ ಚಿತ್ರಕ್ಕಿದೆ.

ಪೋಷಕ ಪಾತ್ರಗಳಲ್ಲಿ ಬ್ಯಾಂಕ್ ಜನಾರ್ಧನ್, ವಿ ಮನೋಹರ್, ಕುರಿ ಪ್ರತಾಪ್, ರಾಜಶೇಖರ್, ಅಕ್ಷರ ರೆಡ್ಡಿ, ರಶ್ಮಿತ ರೋಜಾ, ಗಿರೀಶ್ ಶಿವಣ್ಣ ಹಾಗೂ ಇತರರು ಇದ್ದಾರೆ.Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಬಿಲ್ ಗೇಟ್ಸ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.