`ಮಾಯಾವಿ` ಅವತಾರದಲ್ಲಿ ಸಂಚಾರಿ!
Posted date: 11 Tue, Sep 2018 12:29:14 PM
ಬಿ.ನವೀನ್‍ಕೃಷ್ಣ ಅವರ ಕಥೆ-ನಿರ್ದೇಶನವಿರುವ `ಮೇಲೊಬ್ಬ ಮಾಯಾವಿ?’ ಚಿತ್ರ ಪೋಸ್ಟರ್ ಮೂಲಕ ಸದ್ದು ಮಾಡಿದ್ದು ಗೊತ್ತಿರುವ ಸಂಗತಿ. ಈಗ ಇದೇ ಮಾಯಾವಿ ತಂಡ ನಟ ಸಂಚಾರಿ ವಿಜಯ್ ಅವರ ವಿಶೇಷ ಅವತಾರದಲ್ಲಿರುವ ಕ್ಲೈಮಾಕ್ಸ್ ದೃಶ್ಯದ ಪ್ಯಾಚ್‍ಅಪ್ ಚಿತ್ರೀಕರಣದ ಮೂಲಕ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. ಮೈಸೂರು ಅರಮನೆಯ ಮುಂಭಾಗದಲ್ಲಿ ಅರ್ದಂಭರ್ದ ಯಕ್ಷಗಾನ ಗೆಟ್‍ಅಪ್‍ನಲ್ಲಿ ಕಾಣಿಸಿಕೊಂಡ ವಿಜಯ್, ಮೂಟೆಗಳನ್ನು ಹೊತ್ತುಕೊಂಡು ತಿರುಗಾಡುತ್ತಿದ್ದದ್ದು ಮೈಸೂರಿಗರ ಅಚ್ಚರಿಗೆ ಕಾರಣವಾಯಿತು. ಚಿತ್ರೀಕರಕ್ಕಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡದಲ್ಲಿ ಸುಮಾರು ನೂರಕ್ಕಿಂತೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ವಿಶೇಷ. ಈ ಒಂದು ದೃಶ್ಯದ ಬಗ್ಗೆ ಸಂಚಾರಿ ವಿಜಯ್ ಹೀಗೆ ಹೇಳತ್ತಾರೆ. ``ನನ್ನ ಪಾತ್ರದ ಹೆಸರು ಚಿತ್ರದಲ್ಲಿ ಇರುವೆ. ಈ ಇರುವೆಗೆ ಯಕ್ಷಗಾನ ವೇಷ ಹಾಕಬೇಕೆಂಬ ಮಹದಾಸೆ. ಆದರೆ, ಯಕ್ಷಗಾನ ಮೇಸ್ಟ್ರು ಇರುವೆ ಹುಟ್ಟಿನಿಂದಲೇ ಬಂದ  ನ್ಯೂನತೆಯೊಂದರ ಕಾರಣಕ್ಕಾಗಿ ಆತನನ್ನು ಯಕ್ಷಗಾನ ಮೇಳಕ್ಕೆ ಸೇರಿಸಿಕೊಳ್ಳುವುದಿಲ್ಲ. ಮುಂದೆ ಇರುವೆ ಹೇಗೆ ಅದೇ ಯಕ್ಷಗಾನದ ಮೂಲಕ ಏನು ಮಾಡುತ್ತಾನೆ ಅನ್ನೋದೆ ಚಿತ್ರದ ಇಂಟ್ರೆಸ್ಟಿಂಗ್ ಪಾಯಿಂಟ್. ಹೀಗೆ, ಕರವಾಳಿಯ ಮಾಫಿಯವೊಂದನ್ನು ಅಲ್ಲಿಯದೇ ಕಲೆಯ ಮೂಲಕ ಹೇಳಲು ಹೊರಟಿರುವ ನಿರ್ದೇಶಕರ ತಯಾರಿ ಮೆಚ್ಚುವಂತದ್ದು’’
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಾಯಾವಿ` ಅವತಾರದಲ್ಲಿ ಸಂಚಾರಿ! - Chitratara.com
Copyright 2009 chitratara.com Reproduction is forbidden unless authorized. All rights reserved.