`ರಮೇಶ - ಸುರೇಶ` ಮಾತಿನ ಭಾಗದ ಚಿತ್ರೀಕರಣ ಪೂರ್ಣ
Posted date: 04 Sat, Jan 2020 05:31:14 AM

ಆರ್.ಕೆ.ಟಾಕೀಸ್, ಪಿ.ಕೃಷ್ಣ ಹಾಗೂ ಬಿ.ಶಂಕರ್ ಅವರು ಆರ್.ಕೆ.ಟಾಕೀಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ‘ರಮೇಶ - ಸುರೇಶ‘ ಚಿತ್ರದ ಮಾತಿನ  ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.  ಬೆಂಗಳೂರು, ತುಮಕೂರು, ಇಡಗುಂಜಿ, ಹೊನ್ನಾವರ ಮತ್ತು ಮುರುಡೇಶ್ವರದಲ್ಲಿ ಮೂವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಸಾಹಸ, ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದೆ.

ನಾಗರಾಜ್ - ರಘುಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಂಭಾಷಣೆ ಬರೆದಿದ್ದಾರೆ. ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವನೀತ್ ಸಂಗೀತ ನಿರ್ದೇಶನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆಯಿದೆ.         

ಬೆನಕ್ ಗುಬ್ಬಿ ವೀರಣ್ಣ, ಯಶುರಾಜ್, ಚಂದನ ಸೆಗ್ಗು, ಸತ್ಯಪ್ರಕಾಶ್, ಸಾಧುಕೋಕಿಲ, ಮೋಹನ್ ಜುನೇಜ, ಮಾಸ್ಟರ್ ರಕ್ಷಿತ್, ರೋಬೊ ಗಣೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಮೇಶ - ಸುರೇಶ` ಮಾತಿನ ಭಾಗದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.