`ರಾಜ ರಾಣಿ ರೋರರ್ ರಾಕೇಟ್` ಚಿತ್ರದ ಚಿತ್ರೀಕರಣ ಪೂರ್ಣ
Posted date: 08 Wed, May 2019 10:04:26 AM

ಲೇಖನ ಕ್ರಿಯೇಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಿಸುತ್ತಿರುವ ‘ರಾಜ ರಾಣಿ ರೋರರ್ ರಾಕೇಟ್‘ ಚಿತ್ರದ ‘ಜೋಡೆತ್ತು, ಜೋಡೆತ್ತು ಒಳ್ಳೆಗತ್ತು‘ ಎಂಬ ಹಾಡಿನ ಚಿತ್ರೀಕರಣ ಚಿಕ್ಕಬಾಣಾವಾರದಲ್ಲಿ ೨ದಿನಗಳ ಕಾಲ ನಡೆದಿದೆ. ಭೂಷಣ್ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುವುದರೊಂದಿಗೆ ನಟಿಸಿದ್ದಾರೆ. ೧೫೦ಕ್ಕೂ ಹೆಚ್ಚು ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆ ‘ರಾಜ ರಾಣಿ ರೋರರ್ ರಾಕೇಟ್‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಕೆಂಪೇಗೌಡ ಮಾಗಡಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಭೂಷಣ್ ಅಭಿನಯಿಸಿದ್ದಾರೆ. ಭೂಷಣ್ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ರ‍್ಯಾಂಬೋ ೨‘ ಚಿತ್ರದ ‘ಚುಟು

ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಜ಼್ಞಾನೇಶ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‌ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಜ ರಾಣಿ ರೋರರ್ ರಾಕೇಟ್` ಚಿತ್ರದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.