`ರಾಜಣ್ಣನ ಮಗ` ನಾಳೆಯಿಂದ ತೆರೆಗೆ
Posted date: 14 Thu, Mar 2019 09:32:49 AM

ಯೂನಿವರ್ಸಲ್ ಹ್ಯಾಟ್ರಿಕ್ ಕಂಬೈನ್ಸ್ ಲಾಂಛನದಲ್ಲಿ, ಜಲಗೆರೆ ಪ್ರೈ (ಲಿ) ಲಾಂಛನದಲ್ಲಿ ಹರೀಶ್ ಜಲಗೆರೆ ಅವರು ನಿರ್ಮಿಸಿರುವ ‘ರಾಜಣ್ಣನ ಮಗ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕೋಲಾರ ಸೀನು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಿದ್ದಪ್ಪಾಜಿ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಆರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ, ಹರೀಶ್ ಗೌಡ ಸಂಕಲನ, ಆನಂದ್ ಹಿರಿಯೂರು, ಭೂಷಣ್ ನೃತ್ಯ ನಿರ್ದೇಶನ ಹಾಗೂ ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ನಿರ್ದೆಶನವಿರುವ ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಮಳವಳ್ಳಿ ಸಾಯಿಕೃಷ್ಣ ಬರೆದಿದ್ದಾರೆ.    

ಹರೀಶ್, ಅಕ್ಷತ, ಚರಣ್‌ರಾಜ್, ರಾಜೇಶ್ ನಟರಂಗ, ಕರಿಸುಬ್ಬು, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ರಮೇಶ್ ಪಂಡಿತ್, ರಾಜ್ ರೆಡ್ಡಿ, ಕುರಿ ರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  
  

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಜಣ್ಣನ ಮಗ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.