`ರುಸ್ತುಂ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 27 Thu, Jun 2019 08:53:44 AM

ಜಯಣ್ಣ ಫ಼ಿಲಂಸ್ ಲಾಂಛನದಲ್ಲಿ ಜಯಣ್ಣ - ಬೋಗೇಂದ್ರ ಅವರು ನಿರ್ಮಿಸಿರುವ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ ‘ರುಸ್ತುಂ‘ ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಖ್ಯಾತ ಸಾಹಸ ನಿರ್ದೇಶಕ ಡಾ||ರವಿವರ್ಮ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಸಾಹಸ ನಿರ್ದೇಶನವನ್ನು ರವಿವರ್ಮ ಅವರೆ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ನಾಗು ಆರ್.ಕೆ ಸಂಕಲನ ಹಾಗೂ ರಾಜು ಸುಂದರಂ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ರಘುಸಮರ್ಥ್ ಸಂಭಾಷಣೆ ಬರೆದಿದ್ದಾರೆ.

ಡಾ||ಶಿವರಾಜಕುಮಾರ್, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾರಾಂ, ಹರೀಶ್ ಉತ್ತಮನ್, ಮಹೇಂದ್ರನ್, ಶತ್ರು, ಸಿದ್ಲಿಂಗು ಶ್ರೀಧರ್, ಧನರಾಜ್, ಪದ್ಮಾಜಾರಾವ್, ಮಂಜುನಾಥ್ ಹೆಗಡೆ, ಗಣೇಶ್ ಯಾದವ್, ನೈಲಾ(ಬಾಲನಟಿ), ಅರ್ಜುನ್ ಗೌಡ, ಶಿವರಾಜ ಕೆ.ಆರ್.ಪೇಟೆ, ಮಜಾಟಾಕೀಸ್ ಪವನ್,  ರಾಜಹುಲಿ ಗಿರಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರುಸ್ತುಂ` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.