`ರೂಪಾಯಿ` ಚಿತ್ರದ ಟೀಸರ್ ಬಿಡುಗಡೆ
Posted date: 04 Thu, Jul 2019 08:47:17 AM

ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ. ಅವರು ನಿರ್ಮಿಸುತ್ತಿರುವ ‘ರೂಪಾಯಿ‘ ಚಿತ್ರದ ಟೀಸರ್ ಜುಲೈ ೧ರಂದು ಬಿಡುಗಡೆಯಾಗಿದೆ. ಯಶವಂತ್ ಶೆಟ್ಟಿ ಹಾಗೂ ಡಿ.ಕೆ.ನಾಯಕ್ ಈ ಚಿತ್ರದ ಸಹ ನಿರ್ಮಾಪಕರು.

ವಿನೋದ್ ನಾಗ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಟೀಸರ್ ಮೂಲಕ ಚಿತ್ರದ ಕೆಲವು ತುಣುಕುಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದ ಶೀರ್ಷಿಕೆ ಹೇಳುವಂತೆ ಹಣದ ಬಗ್ಗೆಯ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಕಥೆಯನ್ನು ನಿಜ ಜೀವನಕ್ಕೆ ಹತ್ತಿರವಾಗಿ, ಸಾಂದರ್ಭಿಕ ಮನೋರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ಈ ಚಿತ್ರದ ಚಿತ್ರಕಥೆ ಹೆಣೆಯಲಾಗಿದೆ ಎಂದು ಚಿತ್ರದ ನಾಯಕನ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ವಿನೋದ್ ನಾಗ್ ತಿಳಿಸಿದ್ದಾರೆ.

ನಿರ್ದೆಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಆನಂದ್ ರಾಜ ವಿಕ್ರಮ್ ಅವರ ಸಂಗೀತ ನಿರ್ದೇಶನವಿದೆ. ನಾಗಾರ್ಜುನ್ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ, ಆನಂದ್ ನೃತ್ಯ ನಿರ್ದೇಶನ ಹಾಗೂ ಜಿ.ಮೂರ್ತಿ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿ ವಿನಿ.

ವಿನೋದ್ ನಾಗ್, ಕೃಷಿ ತಾಪಂಡ, ಮೈತ್ರಿ ಜಗದೀಶ್, ರಾಮ್ ಚಂದನ್, ಚಂದನ ರಾಘವೇಂದ್ರ, ಅನಿಲ್ ಕುಮಾರ್,ಪ್ರಮೋದ್ ಶೆಟ್ಟಿ, ರಾಕ್‌ಲೈನ್ ಸುಧಾಕರ್, ಮೋಹನ್ ಜುನೇಜ, ಗಿರೀಶ್, ಸಂಕರಮೂರ್ತಿ, ಸವಿತಾ, ರವಿ ಕಲ್ಯಾಣ್, ಸೀತಾರಾಂ, ರಾಮಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರೂಪಾಯಿ` ಚಿತ್ರದ ಟೀಸರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.