`ಶ್ರೀ ಭರತ ಬಾಹುಬಲಿ` ಚಿತ್ರದ ನಾಯಕರಾಗಿ ಮಂಜು ಮಾಂಡವ್ಯ
Posted date: 11 Tue, Sep 2018 04:38:14 PM

ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಸೂಪರ್ ಹಿಟ್ ಚಲನಚಿತ್ರ "ಮಾಸ್ಟರ್ ಪೀಸ್" ನಿರ್ದೇಶನದ ನಂತರ ಮಂಜು ಮಾಂಡವ್ಯ ಅವರು "ಶ್ರೀ ಭರತ ಬಾಹುಬಲಿ" ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿಪ್ರಿಯರಿಗೆ ಎದುರಾಗುತ್ತಿದ್ದಾರೆ ಈ ಬಾರಿ ನಿರ್ದೇಶಕರಾಗಿ ಅಲ್ಲದೆ, ನಾಯಕರಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಒಂದು ಪ್ರಮುಖ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಆ ಕಾಲದಲ್ಲಿ ಅಣ್ಣಾವ್ರ ಕ್ರೇಜ್ ಎಷ್ಟು ದೊಡ್ಡದು ಎಂದು ತೋರಿಸುವ
ಸನ್ನಿವೇಶ ಇತ್ತು. ಆ ದೃಶ್ಯಕ್ಕೆ ಚಿತ್ರತಂಡ ಕಾಂಟೆಸ್ಸಾ ಕಾರ್ ಒಂದನ್ನು ಬುಕ್ ಮಾಡಿತ್ತು. ಅನಿರೀಕ್ಷಿತವಾಗಿ ಬರಬೇಕಾಗಿದ್ದ ಕಾಂಟೆಸ್ಸಾ ಕಾರು ಬರದೇ ಕೈ ಕೊಟ್ಟಿತು.

ಆಗ ಬೇರೊಂದು ಮೂಲದಿಂದ ಪ್ರಯತ್ನಿಸಿದಾಗ ಚಿತ್ರತಂಡಕ್ಕೆ ಅಣ್ಣಾವ್ರು ಬಳಸಿದ್ದ ಅಂಬಾಸಡರ್ ಕಾರು ಸಿಕ್ಕಿಬಿಟ್ಟಿತ್ತು ಈ ಬೆಳವಣಿಗೆಯಿಂದ ವಿಪರೀತ ಥ್ರಿಲ್ಲಾದ
ಚಿತ್ರತಂಡ ಅಣ್ಣಾವ್ರ ದೃಶ್ಯಕ್ಕೆ ಅಣ್ಣಾವ್ರ ಕಾರೇ ಬಂದಿದ್ದು ನೋಡಿ ಇದು ಅಣ್ಣಾವ್ರ ಆಶೀರ್ವಾದವೇ ಸರಿ ಎಂದು ಭಾವಿಸಿತು.

ಮಾನವ ಜೀವನದಲ್ಲಿ ತ್ಯಾಗ ಎಷ್ಟು ಮುಖ್ಯವಾದದ್ದು ಎಂದು ತೋರಿಸುವ ಕಥೆಗೆ ವಿಶೇಷವಾದ ಮಂಜು ಮಾಂಡವ್ಯ ಬ್ರ್ಯಾಂಡ್ ನ ಹಾಸ್ಯದ ಲೇಪನವಿರುವ ಶ್ರೀ ಭರತ ಬಾಹುಬಲಿ ಕನ್ನಡ ಚಿತ್ರರಸಿಕರಿಗೆ ಹೊಸ ಅನುಭವ ನೀಡಿ ರಂಜಿಸುವುದು ಗ್ಯಾರಂಟಿ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಶ್ರೀ ಭರತ ಬಾಹುಬಲಿ` ಚಿತ್ರದ ನಾಯಕರಾಗಿ ಮಂಜು ಮಾಂಡವ್ಯ - Chitratara.com
Copyright 2009 chitratara.com Reproduction is forbidden unless authorized. All rights reserved.