`ಸೂಜಿದಾರ` ನಾಳೆಯಿಂದ ತೆರೆಗೆ
Posted date: 09 Thu, May 2019 09:43:59 AM

ಸಿನಿಸ್ನೇಹ ಟಾಕೀಸ್ ಲಾಂಛನದಲ್ಲಿ ಅಭಿಜಿತ್ ಕೋಟೆಗಾರ್ ಹಾಗೂ ಸಚೀಂದ್ರನಾಥ್ ನಾಯಕ್ ಅವರು ನಿರ್ಮಿಸಿರುವ ‘ಸೂಜಿದಾರ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೌನೇಶ್ ಬಡಿಗೇರ್ ನಿರ್ದೇಶನದ ಈ ಚಿತ್ರಕ್ಕೆ ಭಿನ್ನಷಡ್ಜ ಸಂಗೀತ ನೀಡಿದ್ದಾರೆ. ಅಶೋಕ್ ವಿ ರಾಮನ್ ಛಾಯಾಗ್ರಹಣ, ಮೋಹನ್ ಸಂಕಲನ ಹಾಗೂ ಮಲ್ಲಿಕಾರ್ಜುನ್ ಮತ್ತಿಘಟ್ಟ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮ ಹಿನ್ನಲೆ ಸಂಗೀತ ನೀಡಿದ್ದಾರೆ.
ಯಶ್ವಂತ್ ಶೆಟ್ಟಿ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಹರಿಪ್ರಿಯ. ಅಚ್ಯುತಕುಮಾರ್, ಸುಚೇಂದ್ರ ಪ್ರಸಾದ್, ಚೈತ್ರ ಕೊಟ್ಟೂರು, ಶ್ರೇಯಾ, ಬಿರಾದಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸೂಜಿದಾರ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.