`ಸೇಂಟ್ ಮಾರ್ಕ್ಸ್ ರಸ್ತೆ` ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ
Posted date: 21 Thu, Nov 2019 11:41:05 AM

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಶೀರ್ಷಿಕೆಗಳ ಚಿತ್ರಗಳು ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಸೇಂಟ್ ಮಾರ್ಕ್ಸ್ ರಸ್ತೆ‘ ಭರತನ್ ಚಿತ್ರಗಳು ಲಾಂಛನದಲ್ಲಿ ಆರ್.ವಿ..ಭರತನ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫ಼ಸ್ಟ್‌ಲುಕ್ ಅನಾವರಣಗೊಳಿಸಿದ್ದಾರೆ ಸೂಪರ್‌ಸ್ಟಾರ್ ಉಪೇಂದ್ರ.

ನೈಜ ಘಟನೆ ಆಧಾರಿತ,  ಹಾರಾರ್ ಥ್ರಿಲ್ಲರ್ ಕಥಾಹಂದರವುಳ್ಳ ಈ ಚಿತ್ರವನ್ನು ಮ್ಯಾಗ್ವೆನ್ ಅವರು ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ೨೯ದಿನಗಳ ಚಿತ್ರೀಕರಣ ನಡೆದಿದೆ.

ಮೂರು ಹಾಡುಗಳು ಹಾಗೂ ಒಂದು ಪ್ರೋಮೊ ಸಾಂಗ್ ಈ ಚಿತ್ರದಲ್ಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಸೂರಜ್ ನಲ್ಲುಸ್ವಾಮಿ ಛಾಯಾಗ್ರಹಣ, ಪ್ರೀತಿಮೋಹನ್ ಸಂಕಲನ, ವಿಕ್ಕಿ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಹರಿಕಿರಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಿಯಾಂಕ ಉಪೇಂದ್ರ, ಮಹತ್ ರಾಘವೇಂದ್ರ, ಯಾಶಿಕಾ ಆನಂದ್, ಸರ ವೆಂಕಟೇಶ್, ಮಾ ಕಾ ಷ  ಆನಂದ್, ಮನೋಬಾಲ, ಕೆ.ಎಸ್.ರವಿಕುಮಾರ್, ರಂಗಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸೇಂಟ್ ಮಾರ್ಕ್ಸ್ ರಸ್ತೆ` ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ - Chitratara.com
Copyright 2009 chitratara.com Reproduction is forbidden unless authorized. All rights reserved.