`ಸೋಜುಗದ ಕಸ್ತೂರಿ ಕನ್ನಡ` ಜೆಂಕಾರ್ ಮ್ಯೂಸಿಕ್ ಕೊಡುಗೆ
Posted date: 08 Sun, Nov 2020 06:26:57 PM

ನಮ್ಮ ತಾಯಿಯಷ್ಟೇ ತಾಯಿನಾಡನ್ನು ಪ್ರೀತಿಸುವ ಕನ್ನಡಿಗರು‌ ನಾವು. ನವಂಬರ್ 1  ನಮಗೆ‌‌ ದೊಡ್ಡ ಹಬ್ಬ . ಅದೇ ಕನ್ನಡ ರಾಜ್ಯೋತ್ಸವ .‌
ಈ ಶುಭ ಸಂದರ್ಭದಲ್ಲಿ ಮ್ಯೂಸಿಕ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಜೆಂಕಾರ್ ಮ್ಯೂಸಿಕ್ ಸೋಜುಗದ ಕಸ್ತೂರಿ ಕನ್ನಡ ಎಂಬ ಸುಂದರ ಹಾಡನ್ನು ಬಿಡುಗಡೆ ಮಾಡಿದೆ ಜೆಂಕಾರ್ ಯೂಟ್ಯೂಬ್‌ ಚಾನಲ್ ನಲ್ಲಿ.
ಖ್ಯಾತ ಗಾಯಕ ಅಜಯ್ ವಾರಿಯರ್‌ ನಟಿಸಿ‌‌, ಹಾಡಿರುವ ಈ‌ ಹಾಡನ್ನು ಜಿಮ್ ಶಿವು ಬರೆದಿದ್ದಾರೆ. ‌ ಯುವರಾಜ್ ಸಂಗೀತ ನೀಡಿದ್ದಾರೆ. ನಿರ್ದೇಶನ ಹಾಗೂ ಸಂಕಲನದ ಜವಾಬ್ದಾರಿ ಮೋಹನ್ ಕಾಮಾಕ್ಷಿ ಅವರದು.
ಶ್ರೀರಂಗಪಟ್ಟಣದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ‌ ಹಾಡನ್ನು ಸುನೀತ್ ಹಲಗೇರಿ ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಈಗಾಗಲೇ ‌ಬಿಡುಗಡೆಯಾಗಿರು ಈ ಹಾಡಿಗೆ ಒಳ್ಳೆಯ ಪ್ರಶಂಸೆ ದೊರಕಿದೆ.
ಸದ್ಯದಲ್ಲೇ ಸಾಕಷ್ಟು ವಿಡಿಯೋ ಹಾಡುಗಳು ಜೆಂಕಾರ್ ಮ್ಯೂಸಿಕ್ ಮೂಲಕ ‌ಬಿಡುಗಡೆಯಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed