`ಹಲೋ ಮಾಮಾ` ನಾಳೆಯಿಂದ
Posted date: 10 Thu, May 2018 01:33:11 PM
ಪ್ರಗತಿ ಸಿನಿ ಕ್ರಿಯೇಷನ್ ಅಡಿಯಲ್ಲಿ ತಯಾರಾಗಿರುವ ನಿಮಾಪಕ ಬಿ ಕೆ ಚಂದ್ರಶೇಖರ್ ಅವರ ‘ಹಲೋ ಮಾಮಾ’...ಥೂ ಹಂಗ್ ಕರಿಬೇಡ್ರೋ ಕನ್ನಡ ಸಿನಿಮಾ ಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಟನೆಯಲ್ಲಿ ನಾಳೆಯಿಂದ  ಬಿಡುಗಡೆ ಆಗುತ್ತಿದೆ.
ಇದೊಂದು ಹಾಸ್ಯಮಯ ಚಿತ್ರ. ಅನಿವಾರ್ಯತೆ ಹಾಗೂ ಅವಶ್ಯಕತೆ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ಚಿತ್ರದ ಅಂತ್ಯದಲ್ಲಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಹ ಇದೆ. ಅರವಿಂದ್ ರಾವ್, ಸಾಂಪ್ರತ, ಭೂಮಿಕಾ, ಸೌಜನ್ಯ, ಪೃಥ್ವಿ ಬನವಾಸಿ ಹಾಗೂ ಇತರರು ಅಭಿನಯಿಸಿರುವ ಚಿತ್ರ ಜಯಣ್ಣ ಕಂಬೈನ್ಸ್ ಇಂದ ಬಿಡುಗಡೆ ಆಗುತ್ತಿದೆ.
ಡಿ ಪ್ರಸಾದ್ ಬಾಬು ಅವರ ಛಾಯಾಗ್ರಹಣ, ಧರಂ-ದೀಪ್ ಸಂಗೀತ, ಶಿವಪ್ರಸಾದ್ ಸಂಕಲನ ಮಾಡಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಹಲೋ ಮಾಮಾ` ನಾಳೆಯಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.