`ಪಾರು ವೈಫ್ ಆಫ್ ದೇವದಾಸ್` ಹಾಡಿನಿಂದ ಪ್ರಾರಂಭ ಹಾಗೂ ಅಂತ್ಯ
Posted date: 16 Mon, Sep 2013 08:48:51 AM

ಕಳೆದ ವಾರ ಕಿರಣ್ ಗೋವಿ ಅವರ ತೃತೀಯ ಚಿತ್ರ ‘ಪಾರು ವೈಫ್ ಆಫ್ ದೇವದಾಸ್’ ಚಿತ್ರದ ಚಿತ್ರೀಕರಣ ಹಾಡಿನೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಸಂಪೂರ್ಣವಾಗಿದೆ. ಈ ಚಿತ್ರವು ಹಾಡಿನೊಂದಿಗೆ ಚಾಲನೆಗೊಂಡಿದ್ದನ್ನು ಸ್ಮರಿಸಿಕೊಂಡ ನಿರ್ದೇಶಕರು ಚಿತ್ರಕ್ಕೆ ಸಂಬಂದ ಪಟ್ಟ ಇನ್ನಿತರ ಚಟುವಟಿಗೆಗಳು ಸಧ್ಯದಲ್ಲೇ ಪೂರ್ಣಗೊಳ್ಳಲಿದೆ ಎನ್ನುತ್ತಾರೆ.

ಪಾರು ಹಾಗೂ ದೇವದಾಸ ವೈಫ್ ಹೇಗಾದಳು ಎಂಬುದು ಕುತೂಹಲ ಇಟ್ಟುಕೊಂಡಿರುವ ‘ಪಾರು ವೈಫ್ ಆಫ್ ದೇವದಾಸ್’ ಕನ್ನಡ ಚಿತ್ರ 12 ದಿವಸಗಳ ಕಾಲ ಚಿಕ್ಕಮಗಳೂರಿನಲ್ಲಿ ‘ಗುರುಕುಲ’ ಸೆಟ್ ಸ್ಥಾಪಿಸಿ ಚಿತ್ರೀಕರಣ ನಡೆಸಿದೆ. ಅಲ್ಲಿ ಎರಡು ಹಾಡು, ಕೆಲವು ಸನ್ನಿವೇಶಗಳು ಹಾಗೂ ಒಂದು ಸಾಹಸ ಸನ್ನಿವೇಶ ಸಹ ಚಿತ್ರೀಕರಣ ಮಾಡಲಾಗಿದೆ. ಈ 12 ದಿವಸಗಳ ಚಿತ್ರೀಕರಣದ ನಂತರ ನಿರ್ದೇಶಕ ಕಿರಣ್ ಗೋವಿ ಅವರು ಗದಗ್ ಜಿಲ್ಲೆಯಲ್ಲಿ ಇನ್ನಷ್ಟು ಚಿತ್ರೀಕರಣವನ್ನು ಸತತವಾಗಿ ಮಾಡಿಕೊಂಡಿದ್ದಾರೆ.

ಕಿರಣ್ ಗೋವಿ ಅವರ ತೃತೀಯ ಚಿತ್ರ ನವಿರಾದ ಪ್ರೇಮ, ಕುತೂಹಲಗಳ ಸಂಗಮ ಕೃಷ್ಣ ದೇವೇ ಗೌಡ ಅವರು ಮುಕ್ತಾರ್ ಅವರ ಜೊತೆ ಹನುಮಂತಪ್ಪ ಅವರ ಕಾರ್ಯನಿರ್ವಾಹಕ ನಿರ್ಮಾಪಕರ ಸಹಾಯದೊಂದಿದೆ ನಿರ್ಮಾಣಕ್ಕೆ ಇಳಿದಿದ್ದಾರೆ. ಗೌಡ ಹಾಗೂ ಮುಕ್ತಾರ್ ಅವರು ಮೂಲತಃ ವಿತರಕರು ಹಾಗೂ ಫೈನಾನ್ಸ್ ವೃತ್ತಿಯಲ್ಲಿ ಬಹಳ ವರ್ಷಗಳಿಂದ ಜೊತೆಯಾಗೆ ಇರುವವರು.

2007ರಲ್ಲಿ ‘ಪಯಣ’, 2010ರಲ್ಲಿ ‘ಸಂಚಾರಿ’ ಹಾಗೂ 2013ರಲ್ಲಿ ‘ಪಾರು ವೈಫ್ ಆಫ್ ದೇವದಾಸ್’ ನಿರ್ದೇಶನಕ್ಕೆ ಕಿರಣ್ ಗೋವಿ ಅವರು ರಮೇಶ್ ರಾಜ್ ಅವರ ಛಾಯಾಗ್ರಹಣದಲ್ಲಿ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಫಳಣಿ ರಾಜ್ ಅವರ ಸಾಹಸದಲ್ಲಿ ಉತ್ಸುಕರಾಗಿ ಶ್ರೀನಗರ ಕಿಟ್ಟಿ ಹಾಗೂ ಸೌಂದರ್ಯ ಜಯಮಾಲ ಅವರ ಮುಖ್ಯ ಪಾತ್ರದಲ್ಲಿ ತೊಡಗಿಸಿಕೊಂಡಿರುವರು ಇದೊಂದು ಪ್ರೀತಿಯ ನಶೆ ಇರುವ ಚಿತ್ರ ಎನ್ನುತ್ತಾರೆ.

ಶ್ರೀಮಂತ ಎಸ್ಟೇಟ್ ಓನರ್ ಮಗನ ಪಾತ್ರ ದಲ್ಲಿ ಶ್ರೀನಗರ ಕಿಟ್ಟಿ ಆಧುನಿಕ ದೇವದಾಸ್ ಆದರೆ ಕಥಕ್ ನೃತ್ಯಗಾರ್ತಿ ಆಗಿ ಸೌಂದರ್ಯ ಜಯಮಾಲಾ ಇದ್ದಾರೆ. ನೇಹ ಪಾಟಿಲ್, ಲಯೇಂದ್ರ, ಮೋಹನ್ ಜುನೇಜ, ವಿ ಮನೋಹರ್ ತಾರಾಗಣದಲ್ಲಿ ಇದ್ದಾರೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed