`ಜಂಟಲ್ ಮ್ಯಾನ್ 2` ಚಿತ್ರದ ಸಂಗೀತ ಸಂಯೋಜನೆ ಕೆಲಸ ಪ್ರಾರಂಭ
Posted date: 18 Tue, Jul 2023 04:11:47 PM
ಈ ಹಿಂದೆ `ಜಂಟಲ್ ಮ್ಯಾನ್`, `ಕಾದಲ್ ದೇಶಂ` ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ `ಜಂಟಲ್ ಮ್ಯಾನ್ 2` ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದ್ದು, ಅದಕ್ಕೂ ಮುನ್ನ, ಸಂಗೀತ ಸಂಯೋಜನೆಯ ಕೆಲಸಗಳು ಪ್ರಾರಂಭವಾಗಿವೆ.
 
RRR ಚಿತ್ರದ `ನಾಟ್ಟು ನಾಟ್ಟು` ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, `ಜಂಟಲ್ ಮ್ಯಾನ್ 2`ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಕೀರವಾಣಿ ಸಂಗೀತಕ್ಕೆ ಖ್ಯಾತ ಗೀತರಚನೆಕಾರ ವೈರಮುತ್ತು ಸಾಹಿತ್ಯ ರಚಿಸುತ್ತಿದ್ದಾರೆ.
 
ಈಗಾಗಲೇ ಸೋಮವಾರದಿಂದ ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಟ್ಯೂನ್ ಹಾಕುವ ಕೆಲಸ ಪ್ರಾರಂಭವಾಗಿದೆ. ಈ ಸೆಷನ್ನಲ್ಲಿ ಕೀರವಾಣಿ, ವೈರಮುತ್ತು, ಕುಂಜುಮೋನ್, ಗೋಕುಲ್ ಕೃಷ್ಣ ಮುಂತಾದವರು ಭಾಗವಹಿಸಿದ್ದಾರೆ.
 
`ಜಂಟಲ್ ಮ್ಯಾನ್ 2` ಚಿತ್ರಕ್ಕೆ ಎ. ಗೋಕುಲ್ ಕೃಷ್ಣ ಕಥೆ-ಚಿತ್ರಕಥೆ ರಚಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed