`ಕನ್ನಡದ ಕಿರಣ್ ಬೇಡಿ` ಈ ವಾರ ತೆರೆಗೆ
Posted date: 25/March/2009

ಖ್ಯಾತ ನಿರ್ಮಾಪಕ ರಾಮು ನಿರ್ಮಾಣದ `ಕನ್ನಡದ ಕಿರಣ್ ಬೇಡಿ' ಚಿತ್ರ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. `ಯುಗಾದಿ' ಶುಭದಿನದಂದು ತೆರೆ ಕಾಣುತ್ತಿರುವ ಚಿತ್ರ ನೋಡುಗರಿಗೆ ಮುದ ನೀಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

     ಹಲವು ವರ್ಷಗಳ ಕಾಲ ಅಭಿನಯದಿಂದ ದೂರ ಸರಿದಿದ್ದ ಮಾಲಾಶ್ರೀ ಚಿತ್ರದ ನಾಯಕಿ. ಒಂದು ಕಾಲದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರವನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದ ಮಾಲಾಶ್ರೀ ಪ್ರಸ್ತುತ ಚಿತ್ರದಲ್ಲೂ ದಕ್ಷ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ತರಭೇತಿ ಪಡೆದ ಅವರು ಸಾಹಸ ಸನ್ನಿವೇಶಗಳಲ್ಲಿ ನೈಜವಾಗಿ ಪಾಲ್ಗೊಂಡಿದ್ದಾರೆ. `ದುರ್ಗಿ', `ಚಾಮುಂಡಿ'ಯಾದ ಮಾಲಾಶ್ರೀ ಈಗ `ಕನ್ನಡದ ಕಿರಣ್ ಬೇಡಿ' ಯಾಗಿ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ.

ಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ ೨೫ನೇ ಕೊಡುಗೆ `ಕನ್ನಡದ ಕಿರಣ್ ಬೇಡಿ' ಚಿತ್ರವನ್ನು ಖ್ಯಾತ ನಿರ್ದೇಶಕ ಓಂಪ್ರಕಾಶ್ರಾವ್ ನಿರ್ದೇಶಿಸಿದ್ದಾರೆ. ಹಂಸಲೇಖ ಅವರು ಚಿತ್ರಕ್ಕೆ ಗೀತರಚನೆ ಮಾಡಿ ಸಂಗೀತ ಸಂಯೋಜಿಸಿದ್ದು, ಚಿತ್ರದ ಧ್ವನಿಸುರುಳಿಗಳು ಹೆಚ್ಚು ಜನಪ್ರಿಯವಾಗಿದೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ರಂಗನಾಥ್ ಸಂಭಾಷಣೆ, ಪಳನಿರಾಜ್ ಸಾಹಸ, ಪ್ರದೀಪ್ ಅಂಟೋನಿ ನೃತ್ಯ, ಸರಿಗಮ ವಿಜಿ ಸಹನಿರ್ದೇಶನ, ಇಸ್ಮಾಯಿಲ್, ಕುಮಾರ್ ಕಲೆ, ಭರತ್, ಸೋಮು ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮಾಲಾಶ್ರೀ, ಶ್ರೀನಿವಾಸಮೂರ್ತಿ, ಆಶೀಷ್ ವಿದ್ಯಾರ್ಥಿ, ರಂಗಾಯಣ ರಘು, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಜಿ.ವಿ.ಮಹೇಶ್, ಧರ್ಮ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed