`ಸುಕ್ಕಾ` ಬಿರುಸಿನ ಚಿತ್ರೀಕರಣ
Posted date: 16 Mon, Sep 2013 08:47:41 AM

ವೀರಾಂಜನೆಯ ಸ್ವಾಮಿ ದೇವಸ್ಥಾನ ಮಹಾಲಕ್ಷ್ಮಿ ಲೇ ಔಟ್ ಅಲ್ಲಿ ಪ್ರಾರಂಭವಾದ `ಸುಕ್ಕಾ` ಇದೀಗ ಶೇಕಡಾ 60 ರಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡು ಇದೆ ತಿಂಗಳ 28 ರಿಂದ ಉಳಿದ ಭಾಗದ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಪೂರ್ತಿಗೊಳಿಸಲಾಗುವುದು  ನಿರ್ಮಾಪಕರದ ಕರುನಾಡ ಕಿಶೋರ್ ಹಾಗೂ ಪ್ರಾಣ್ ಹೇಳಿಕೊಂಡಿದ್ದಾರೆ.

ಅಮಾಯಕರು ಹಳ್ಳಿಯಿಂದ ಬಂದು ನಗರದಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಹಾಗೂ ಅದರಿಂದ ಆಚೆ ಬರುವುದಕ್ಕೆ ವಿಲವಿಲ ಒದ್ದಾಡುವಾದನ್ನು ಈ ಚಿತ್ರದಲ್ಲಿ ಮೂರು ನಾಯಕ ಹಾಗೂ ಮೂರು ನಾಯಕಿಯರ ಸಂಗಮದಲ್ಲಿ ಹೇಳಲಾಗುವುದು.

ನಿರ್ದೇಶಕ ಪ್ರಾಣ್ ಅವರು ಈಗಾಗಲೇ ಸಲಗ, ಇಷ್ಟ ಕನ್ನಡ ಸಿನೆಮಗಳಿಗೆ ಸಹಾಯಕರದವರು. ಕಲೆಮನೆ ಥಿಯೇಟರ್ ಅಡಿಯಲ್ಲಿ ಕರುನಾಡ ಕಿಶೋರ್ ಅವರು ನಿರ್ಮಾಪಕರು.

ಬಚ್ಚನ್ ಬೋಪಣ್ಣ, ಶಿವಕುಮಾರ್, ರೋಹಿತ್, ಕೃಷ್ಣ, ತ್ರಿಶೂಲ್, ಮಾನಸಿ, ನಾಗವಲ್ಲಿ, ದೀಪಿಕ ಹಾಗೂ ಮಮತಾ ರಾವತ್, ಕಿಲ್ಲರ್ ವೆಂಕಟೇಶ್ ಪಾತ್ರವರ್ಗದಲ್ಲಿ ಇದ್ದಾರೆ.

ಮಧುರ ಅವರ ಸಾಹಿತ್ಯ ಹಾಗೂ ರಾಗ ಸಂಯೋಜನೆ, ದುರ್ಗ ಪಿ ಎಸ್ ಅವರ ಸಂಕಲನ, ಸ್ಟಂಟ್ ಶಿವು ಅವರ ಸಾಹಸ, ರಾಜೇಶ್ ಬ್ರಹ್ಮಾವರ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed