`ಡಾಲರ್ಸ್ ಪೇಟೆ`ಯಲ್ಲಿ ಕೆಜಿಎಫ್ ಗರುಡ ರಾಮ್ ಸಹೋದರ ವೆಂಕಟ್ ರಾಜ್ ಡಾನ್ - ಡಾನ್ ಪಳನಿ ಪೋಸ್ಟರ್ ರಿಲೀಸ್
Posted date: 03 Fri, Feb 2023 09:06:15 AM
ಮೋಹನ್ ಎನ್ ಮುನಿನಾರಾಯಣಪ್ಪ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ `ಡಾಲರ್ಸ್ ಪೇಟೆ`. ಫಸ್ಟ್ ಲುಕ್ ಪೋಸ್ಟರ್, ಕ್ಯಾರೆಕ್ಟರ್ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರತಂಡ ಡಾಲರ್ಸ್ ಪೇಟೆಯ ಡಾನ್ ಪಾತ್ರಧಾರಿಯನ್ನು ಅನಾವರಣ ಮಾಡಿದೆ. `ಡಾಲರ್ಸ್ ಪೇಟೆ` ಚಿತ್ರದಲ್ಲಿ ಡಾನ್ ಪಳನಿ ಪಾತ್ರಧಾರಿಯಾಗಿ `ಕೆಜಿಎಫ್` ಖ್ಯಾತಿಯ ಗರುಡ ರಾಮ್ ಸಹೋದರ ವೆಂಕಟ್ ರಾಜ್ ನಟಿಸುತ್ತಿದ್ದಾರೆ. ಡಾನ್ ಪಳನಿ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. 
 
ಚಿತ್ರೀಕರಣ ಕಂಪ್ಲೀಟ್ ಮಾಡಿ ರೀರೆಕಾರ್ಡಿಂಗ್ ಹಂತದಲ್ಲಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಸೌಮ್ಯ ಜಗನ್ ಮೂರ್ತಿ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಡಾನ್ ಪಳನಿ ಲುಕ್ ರಿವೀಲ್ ಮಾಡಿದೆ. ಮೋಹನ್ ಎನ್ ಮುನಿನಾರಾಯಣಪ್ಪ   `ಮಾರ್ಫಿ`, `ಮದಗಜ`ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು
ಡಾಲರ್ಸ್ ಪೇಟೆ’ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.  

ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ `ಡಾಲರ್ಸ್ ಪೇಟೆ` ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್. ಎಸ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಕ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. 

ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಕ್ಯಾಮೆರಾ ವರ್ಕ್, ಮಹೇಶ್ ತೊಗಟ್ಟ ಸಂಕಲನ,  ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನ, ರಮೇಶ್ ಎಸ್, ಮನೋಹರ ಸಹಬರವಣಿಗೆ ಚಿತ್ರಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಪೂಜಾ.ಟಿ.ವೈ ‘ಡಾಲರ್ಸ್ ಪೇಟೆ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed