`ಟಿಪಿಕಲ್ ಕೈಲಾಸ` ಚಿತ್ರಕ್ಕೆ ಚಾಲನೆ
Posted date: 24 Mon, Jun 2013 10:00:40 AM
ಶ್ರೀಕೈವಲ್ಯನಿಧಿ ಕಂಬೈನ್ಸ್ ಲಾಂಛನದಲ್ಲಿ ಎನ್.ದೇವರಾಜ್ ಅರಸ್ ಹಾಗೂ ಎಸ್.ಟಿ.ಶಿವಕುಮಾರ್ ಅವರು ನಿರ್ಮಿಸುತ್ತಿರುವ ‘ಟಿಪಿಕಲ್ ಕೈಲಾಸ‘ ಚಿತ್ರ ಕಳೆದವಾರ ಕಂಠೀರವ ಸ್ಟುಡಿಯೊದಲ್ಲಿ ಆರಂಭವಾಯಿತು. ಚಿತ್ರಕ್ಕೆ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. 
     ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆರಂಭಫಲಕ ತೋರಿದರೆ ಗಿರಿಜಾಲೋಕೇಶ್ ಕ್ಯಾಮೆರಾ ಚಾಲನೆ ಮಾಡಿದರು. ಪ್ರಥಮ ಸನಿವೇಶದ ನಿರ್ದೇಶನವನ್ನು ನಿರ್ದೇಶಕ ಓಂಪ್ರಕಾಶ್‌ರಾವ್ ಮಾಡಿದರು. ದಿನಕರ್‌ತೂಗುದೀಪ, ರವಿಶಂಕರ್‌ಗೌಡ, ವಿ.ಮನೋಹರ್, ಕವಿರಾಜ್ ಮುಂತಾದ ಗಣ್ಯರು ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. 
     ಸೃಜನ್‌ಲೋಕೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಓಂಪ್ರಕಾಶ್‌ರಾವ್, ರಾಜುತಾಳಿಕೋಟೆ, ಆಸಿಫ಼್, ಶ್ರೀಧರ್, ಶಶಿಧರ್‌ಭಟ್, ಎಂ.ಎನ್.ಲಕ್ಷ್ಮೀದೇವಿ, ಚಿತ್ರಾಶೆಣೈ ಮುಂತಾದವರಿದ್ದಾರೆ.
     ಮಲ್ಲಿಕಾರ್ಜುನ್ ಬಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡುತ್ತಿದ್ದಾರೆ. ಕಿರಣ್‌ಹಂಪಾಪುರ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನ, ಎನ್.ಕುಮಾರ್ ಕಲಾನಿರ್ದೇಶನ, ಮುರಳಿ, ಮದನ್-ಹರಿಣಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜಭಟ್, ವಿ.ನಾಗೇಂದ್ರಪ್ರಸಾದ್, ಜಯಂತಕಾಯ್ಕಿಣಿ ಹಾಗೂ ವಿ.ಮನೋಹರ್ ಬರೆದಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed