`ಎಲಕ್ಷನ್` ಚುನಾವಣೆಗೆ ಮುಂಚೆ ಬರಲಿದೆ
Posted date: 29 Mon, Apr 2013 08:45:33 AM

ಅಂದು ಮೋಹಕ ನಟಿ ಇಂದು ಸಾಹಸ ಸಿನೆಮಾಗಳ ರಾಣಿ ಮಾಲಾಶ್ರೀ ಅವರು ‘ಎಲಕ್ಷನ್’ ಅಧಿಕಾರಿಯಾಗಿ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಬರುವುದಕ್ಕೂ ಮುಂಚೆಯ ‘ಎಲಕ್ಷನ್’ ಸಿನೆಮಾದಲ್ಲಿ ರಾರಾಜಿಸಲಿದ್ದಾರೆ.
ಹೆಸರಾಂತ ನಿರ್ಮಾಪಕ ರಾಮು ಅವರ ಬಹು ನಿರೀಕ್ಷಿತ ಚಿತ್ರ ಎನ್ ಓಂ ಪ್ರಕಾಷ್ ರಾವು ಅವರ ನಿರ್ದೇಶನದಲ್ಲಿ ಚುನಾವಣೆಗೆ ಹೋಗುವ ಎಲ್ಲರೂ ನೋಡಲೇಬೇಕಾದ ಚಿತ್ರ.

ಎಲಕ್ಷನ್ ಚಿತ್ರದ ಕೆಲವು ಮೆಚ್ಚುವ ಅಂಶಗಳು ಏನೇನು....
• ವ್ಯಾಪಾರಿ ಚಿತ್ರದಲ್ಲಿ ಸಾಮಾಜಿಕ ಕಳಕಳಿ ಜೊತೆಗೆ ‘ಚುನಾವಣೆ’ ಅಲ್ಲಿ ಯಾಕೆ ಮತ ಚಲಾಯಿಸಬೇಕು ಎಂಬ ವಿಚಾರ ಹೇಳಲಾಗಿದೆ.
• 70 ಕ್ಕೂ ಹೆಚ್ಚು ದಿವಸಗಳ ಚಿತ್ರೀಕರಣ ಬಹುತೇಕ ಕಡೆ ಬಿರುಸಿನ ಚಿತ್ರೀಕರಣ ಜನಸ್ತೋಮದ ಜೊತೆಗೆ ಮಾಡಲಾಗಿರುವುದು ವಿಶೇಷ. ಬೆಂಗಳೂರು, ಉತ್ತರ ಕನ್ನಡ, ಮೈಸೂರ್. ಮಂಡ್ಯ, ಬೆಳಗಾವಿ, ಬಳ್ಳಾರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಈ ರಾಜಕೀಯ ಲೇಪಿತ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
• ಯಾವುದೇ ರಾಜಕೀಯ ಪಕ್ಷಗಳನ್ನು ಓಲೈಸದೆ ಜನರಿಗೆ ಜವಾಬ್ದಾರಿಯನ್ನು ಹೇಳಲಿರುವ ಚಿತ್ರ. ಈ ಚಿತ್ರದ ಕಥಾವಸ್ತುವು ಎರಡು ವರ್ಷಗಳಿಂದ ರಾಮು ಅವರ ಮನಸಿನಲ್ಲಿ ಇದ್ದ ಸಿನೆಮಾ ಕಥೆ.
• ರಾಮು, ಓಂ ಪ್ರಕಾಷ್ ರಾವು ಹಾಗೂ ಮಾಲಾಶ್ರೀ ಎಂಬ ಮೂರು ಶಕ್ತಿಗಳ ಸಂಗಮ – ರಾಮು ಅವರ ಜೊತೆ ರಾವು ಅವರು ಅನೇಕ 100 ದಿವಸಗಳ ಚಿತ್ರಗಳನ್ನು ಕೊಟ್ಟಿರುವರು ‘ಕನ್ನಡದ ಕಿರಣ್ ಬೇಡಿ’ ನಂತರ ಜೊತೆಯಾಗಿರುವ ಚಿತ್ರ.
• ಮನರಂಜನೆ, ಭಾವನಾತ್ಮಕ ಸಂದರ್ಭಗಳು ಹಾಗೂ ವಿಷಯಗಳ ಸೂಕ್ಷ್ಮತೆ ಇಲ್ಲಿ ವ್ಯಕ್ತವಾಗಿದೆ.
• ಪ್ರತಿಯೊಂದು ಪಾತ್ರವು ಸಂದೇಶವನ್ನು ಸಹ ಹೇಳುತ್ತಾ ಹೋಗುತ್ತದೆ.
• ನಾಯಕಿ ಮಾಲಾಶ್ರೀ ಅವರು ಹೆಸರಾಂತ ಚುನಾವಣಾ ಅಧಿಕಾರಿ ಟಿ. ಎನ್ ಶೇಷನ್ ಅವರ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡು ಪಾತ್ರಕ್ಕೆ ಬೇಕಾದ ಗತ್ತನ್ನು ತಂದುಕೊಂಡಿದ್ದಾರೆ.
• ಮಾಲಾಶ್ರೀ ಅವರ ವೃತ್ತಿ ಬದುಕಿನಲ್ಲಿ ಬಹಳ ಬುದ್ದಿವಂತಿಕೆ, ಶಕ್ತಿ, ನೈಪುಣ್ಯತೆ ತುಂಬಿರುವ ಪಾತ್ರ.
• ಮಾಲಾಶ್ರೀ ಅವರ ಪಾತ್ರವು ಹೆಚ್ಚಾಗಿ ಕಣ್ಣಿನಲ್ಲೇ ಸೂಚಿಸುವ ವಿಷಯಗಳು ಅಡಕವಾಗಿರುವ ಚಿತ್ರ. ಆ ಪವರ್ ಅನ್ನು ತಂದುಕೊಳ್ಳುವುದಕ್ಕಾಗಿ ಮಾಲಾಶ್ರೀ ಅವರು ಹಲವು ಪರಿಶ್ರಮವನ್ನು ಮಾಡಿದ್ದಾರೆ.
• ಇನ್ನೂ ‘ಎಲಕ್ಷನ್’ ಚಿತ್ರವನ್ನೂ ರೀತಿ ರಿವಾಜುಗಳನ್ನು ಅರಿತು ಮಾಡಿರುವ ಚಿತ್ರ. ಅದಕ್ಕೆ ವ್ಯಾಪಾರಿ ಲೇಪನ ಹಾಕಲಾಗಿದೆ ಅಷ್ಟೇ.
• ‘ಎಲಕ್ಷನ್’ ಚಿತ್ರದಲ್ಲಿ ಮಾಲಾಶ್ರೀ ಅವರು ಅಭಿನಯಿಸಿರುವ ಪಾತ್ರವನ್ನು ಇಡೀ ಭಾರತೀಯ ಚಿತ್ರರಂಗದಲ್ಲೇ ಯಾವ ಮಹಿಳಾ ನಟಿ ಅಭಿನಯಿಸಿರದೆ ಇರುವ ಪಾತ್ರ.
• ‘ಚುನಾವಣೆ’ ನೀತಿ ನಿಯಮಗಳನ್ನು ಪಾಲಿಸಿಕೊಂಡು ಹೋದರೆ ಅಷ್ಟೇ ಸಾಕು ಎಂದು ಹೇಳುವ ಚಿತ್ರವೂ ಸಹ ಹೌದು.
• ಈ ಹಿಂದೆ ಮಾಲಾಶ್ರೀ ಅವರ ಪಾತ್ರಗಳು ಅನೇಕ ಹೆಣ್ಣು ಮಕ್ಕಳಿಗೆ ಪ್ರೇರಣೆ ಆಗಿ ಪೋಲೀಸು ಅಧಿಕಾರಿಯೊ, ಐ.ಎ. ಎಸ್  ಅಧಿಕಾರಿಯೊ ಆಗಿರುವ ಉದಾಹರಣೆಗಳು ಇದೆ. ಅದೇ ರೀತಿ ಈ ‘ಎಲಕ್ಷನ್’ ಚಿತ್ರವೂ ಅನೇಕರಿಗೆ ಖುಷಿಯ ಜೊತೆಗೆ ಮನಸಿನಲ್ಲಿ ದೈರ್ಯ ತುಂಬುವುದು ಗ್ಯಾರಂಟಿ ಎಂದು ಚಿತ್ರತಂಡ ಅಂದುಕೊಂಡಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed