`ನಿನ್ನಿಂದಲೇ` ನ್ಯೂಯಾರ್ಕ್ ಹೊರಡಲು ಸಿದ್ದ
Posted date: 16 Mon, Sep 2013 09:03:40 AM

ಹೊಂಬಾಳೆ ಫಿಲ್ಮ್ಸ್ ಅವರ ಮೊದಲ ಕಾಣಿಕೆ ‘ನಿನ್ನಿಂದಲೇ’ ಪ್ರಪಚಂದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ 40 ದಿವಸಗಳ ಚಿತ್ರೀಕರಣಕ್ಕೆ ಇದೆ ತಿಂಗಳ 24 ರಂದು ಹೊರಡಲು ಸಿದ್ದತೆ ಮಾಡಿಕೊಂಡಿದೆ. ತಂಡದ 32 ಸದಸ್ಯರಲ್ಲಿ ಪುನೀತ್ ರಾಜಕುಮಾರ್, ಏರಿಕ ಫರ್ನಾಂಡೆಸ್, ನಿರ್ದೇಶಕ ಜಯಂತ್ ಪರಂಜಿ,ವಿನಾಯಕ್ ಜೋಷಿ, ಆಲೋಕ್ ಬಾಬು, ಸಾನಿಯಾ ದೀಪ್ತಿ, ಸಾಧು ಕೋಕಿಲ, ರಂಗಾಯಣ ರಘು, ಜುಗಾರಿ ಅವಿನಾಷ್, ಛಾಯಾಗ್ರಹಕ  ಪಿ ಜಿ ವಿಂಧ ಹಾಗೂ ಇನ್ನಿತರರು ಇದ್ದಾರೆ.

ನಿರ್ಮಾಪಕ ವಿಜಯ್ ಕಿರಗಂದುರ್ ಅವರ ಪ್ರಕಾರ ನ್ಯೂಯಾರ್ಕ್ ಅಲ್ಲಿ ‘ಫಿಯರ್ ಫ್ಯಾಕ್ಟರ್’ ಸಂಬಂದ ಪಟ್ಟ ಆಕ್ರಮಣಕಾರಿ ದೃಶ್ಯಗಳನ್ನು ಸೆರೆ ಹಿಡಿಯುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಇದೆ ಮೊದಲು. ಮೂರು ಬಹು ಮುಖ್ಯ ದೃಶ್ಯಗಳ ಚಿತ್ರೀಕರಣಕ್ಕೆ ಅಪಾರ ವೆಚ್ಚವೂ ಆಗಲಿದೆ. ಇದು ‘ನಿನ್ನಿಂದಲೇ’ ಚಿತ್ರದ ಮುಖ್ಯ ಆಕರ್ಷಣೆಗಳಲ್ಲಿ ಒಂದು. ಮಾತಿನ ಬಾಗದ ಚಿತ್ರೀಕರಣ ಹಾಗೂ ಮೂರು ಹಾಡುಗಳನ್ನು ಸಹ ನಿರ್ದೇಶಕ ಜಯಂತ್ ಪರಂಜಿ ಅವರು ಕ್ಯಾಮರದಲ್ಲಿ ತುಂಬಿಕೊಳ್ಳಲ್ಲಿದ್ದಾರೆ.

ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಂಜಿ ಅವರು ಪ್ರೇಮಿಂಚಿಕುಂದಾಮ್ರ ಚಿತ್ರದ ನನಟರ ಬಾವಗರು ಬಾಗುನ್ನರ, ಪ್ರೇಮಾಂಟೆ ಈಡೇರ, ಟಕ್ಕರಿ ಡೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ ದಾದಾ ಎಂ ಬಿ ಬಿ ಎಸ್, ಸಖಿಯ, ಅಲ್ಲಾರೀ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು.

ನ್ಯೂ ಯಾರ್ಕ್ ಇಂದ ಬಂದ ನಂತರ ಬ್ಯಾಂಗ್ ಕಾಕ್  ದೇಶದಲ್ಲಿ ಕೆಲವು ಸಾಹಸ ಸನ್ನಿವೇಶಗಳನ್ನು ಪೂರ್ತಿಗೊಳಿಸಿ ಆನಂತರ ಕೆಲವು ದಿವಸಗಳ ಪ್ಯಾಚ್ ವರ್ಕ್ ಬಾಕಿ ಇರುವುದು. ಆನಂತರ ಚಿತ್ರೆತರ ಚಟುವಟಿಗೆಗಳು ಪ್ರಾರಂಭವಾಗಿ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಹಬ್ಬಕ್ಕೆ ‘ನಿನ್ನಿದಲೇ’ ಚಿತ್ರವು ಪ್ರೇಕ್ಷಕರ ಮುಂದೆ ಬರುವ ಯೋಚನೆಯಲ್ಲಿ ನಿರ್ಮಾಪಕ ವಿಜಯ್ ಅವರು ಇದ್ದಾರೆ.

ಅಂದಹಾಗೆ ‘ನಿನ್ನಿಂದಲೇ’ ಚಿತ್ರವು 20 ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಒರಿಒನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಹೈದರಾಬಾದ್ ಸ್ಥಳದಲ್ಲಿ ಮುಗಿಸಿಕೊಂಡಿದೆ. ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟೆರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು.

‘ನಿನ್ನಿಂದಲೇ’ ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗುವುದು.

ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ.

ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed