`M R P` ಚಿತ್ರಕ್ಕೆ ಜಗ್ಗೇಶ್ ಮಾತು ಜೋಡಿಸಿದರು
Posted date: 31 Sat, Aug 2019 – 08:11:38 AM

ನವರಸ ನಾಯಕ ಜಗ್ಗೇಶ್ ಸಹ ತಮ್ಮ ಸಹೋದ್ಯೋಗಿಗಳಂತೆ ಅವರ ಬಳಿ ಬರುವವರಿಗೆ ಪ್ರೋತ್ಸಾಹ ನೀಡುತ್ತಲೆ ಬಂದಿದ್ದಾರೆ. ಇದೀಗ ಜಗ್ಗೇಶ್ ಅವರ ಕಂಠದಲ್ಲಿ ಎಂ ಆರ್ ಪಿ ಕನ್ನಡ ಸಿನಿಮಾಕ್ಕೆ ಆರಂಭ ಹಾಗೂ ಅಂತ್ಯದಲ್ಲಿ ಚಿತ್ರದ ಸಂದೇಶದ ಜೊತೆ ಪ್ರೇಕ್ಷಕರಿಗೆ ಕೇಳಿಸಲಾಗುವುದು. ನವರಸ ನಾಯಕ ಜಗ್ಗೇಶ್ ಸ್ನೇಹ ಪೂರ್ವಕವಾಗಿ ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಎಂ ಆರ್ ಪಿ ಅಂದರೆ ‘ಮೋಸ್ಟ್ ರೇಸ್ಪಂಸಿಬಲ್ ಪರ್ಸನ್’ ಎಂದು ಅರ್ಥ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯಲಿದ್ದಾರೆ.

‘ಎಂ ಆರ್ ಪಿ’ ಚಿತ್ರವನ್ನ ನಿರ್ದೇಶಕ ಎಂ ಡಿ ಶ್ರೀಧರ್, ಛಾಯಾಗ್ರಾಹಕ ಕೃಷ್ಣ ಕುಮಾರ್, ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.
‘ನನ್ ಮಗಳೇ ಹೀರೋಯಿನ್’ ಸಿನಿಮಾ ನಿರ್ದೇಶಕ ಬಾಹುಬಲಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒಟ್ಟು ಕೊಡಲಾಗಿದೆ. ಹರ್ಷವರ್ಧನ ಸಂಗೀತ, ಗುಡುಲ್ಪೇಟೆ ಸುರೇಶ್ ಈ ಚಿತ್ರದಿಂದ ಎಂ ಎಂ ಸೂರಿ ಹೆಸರಿನಲ್ಲಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ವಿಜಯ್ ಚೆಂಡೂರ್, ಬಾಲ ರಜವಾಡಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed