ಸ್ಯಾಂಡಲ್ವುಡ್ನಲ್ಲಿ `ಉಪ್ಪು ಹುಳಿ ಖಾರ`, `ನಾತಿಚರಾಮಿ`, `ಪಡ್ಡೆಹುಲಿ`, `100`, `ಗಾಳಿಪಟ 2` ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ "45" ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ "ಘುಸ್ಪೈಥಿಯಾ" ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿತು.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ.