ಅರಣ್ಯಕಾಂಡ ಚಿತ್ರದ ಚಿತ್ರೀಕರಣ ಮುಕ್ತಾಯ
Posted date: 10 Thu, May 2018 01:23:24 PM
ಇನ್‌ಫಿನಿಟಿ ಆರ್ಟ್ಸ್ ಲಾಂಛನದಲ್ಲಿ  ಅನಿಲ್ ಬ್ರಹ್ಮಾವರ್ - ಲಕ್ಷ್ಮಿ ಅನಿಲ್ ನಿರ್ಮಾಣದ ಅರಣ್ಯಕಾಂಡ(ದಾರಿ ಯಾವುದಯ್ಯಾ ವೈಕುಂಠಕೆ..!) ಚಿತ್ರದ ಚಿತ್ರೀಕರಣ ಸದ್ದುಗದ್ದಲವಿಲ್ಲದೆ ಪೂರೈಸಿದೆ.  ರಘುನಂದನ್ ಎಸ್ -ನಿರ್ದೇಶನದ ಈ ಚಿತ್ರಕ್ಕೆ ರಾಕೇಶ್-ಛಾಯಾಗ್ರಹಣ, ಸಂಗೀತ-ಹೇಮಂತ್ ಜೋಯಿಸ್, ಸಂಕಲನ-ಬಿ.ಎಸ್.ಕೆಂಪರಾಜು, ಕಲರಿಸ್ಟ್ -ದೀಪಕ್ ರಾಜು, ವಿಎಫ್‌ಎಕ್ಸ್&ಗ್ರಾಫಿಕ್ಸ್ - ತ್ರಿನೇತ್ರ, ಎರಡು  ಹಾಡುಗಳಿರುವ ಚಿತ್ರದಲ್ಲಿ ಅಮರ್, ಅರ್ಚನ ಕೊಟ್ಟಿಗೆ, ಗುರುರಾಜ್ ಶೆಟ್ಟಿ, ತಎಕ್ಕಡೆ ಪವನ್ ದಾಮೋದರ್, ಆಯುಶ್, ಮುನಿಪ್ರಸಾದ್, ಚಂದನ್ ರಾವ್, ಸುಷ್ಮಗೌಡ ಮುಂತಾದವರು ಅಭಿನಯಿಸಿದ್ದಾರೆ.  ನಾಯಕ ಒಬ್ಬ ಸಾಮಾನ್ಯ, ಆದರೆ ಬುದ್ದಿವಂತ ಕಳ್ಳ, ನಾಯಕಿ ವಾರಪತ್ರಿಕೆಯೊಂದರಲ್ಲಿ ಪತ್ರಕರ್ತೆ, ಕಾಡಿನಲ್ಲಿ ಹುದುಗಿರುವ ವಿಷಯದ ಮಾಹಿತಿ ದೊರಕುತ್ತದೆ.  ಅದರ ಬೆನ್ನಟ್ಟಲು ನಾಯಕ ಜನರ ತಂಡವೊಂದನ್ನು ರಚಿಸಿ ಹುಡುಕಾಟಕ್ಕೆ ಹೊರಡುತ್ತಾನೆ.  ಅಲ್ಲಿ ಜರುಗುವ ನೋವು-ನಲಿವು ಹತಾಶೆಗಳ ಯಥಾವತ್ ಚಿತ್ರಣ ವೈಭವೀಕರಸಿದೆ ನೈಜವಾಗಿ ಚಿತ್ರಿಸಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅರಣ್ಯಕಾಂಡ ಚಿತ್ರದ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.