ಆ ಒಂದು ನೋಟು ಸೆನ್ಸಾರ್ ಪಡೆಯಿತು
Posted date: 06 Fri, Sep 2019 06:23:01 PM

ಫ್ರೆಂಡ್ಸ್ ಫಿಲ್ಮ್ ಫ್ಯಾಕ್ಟರೀ ಅಡಿಯಲ್ಲಿ ನಿರ್ಮಾಣ ಆಗಿರುವ ‘ಆ ಒಂದು ನೋಟು’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ನೀಡಲಾಗಿದೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು ಶೀಘ್ರದಲ್ಲೇ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುವುದಾಗಿ ನಿಶ್ಚಯಿಸಿದೆ.

ಹಾಸ್ಯ, ಸಸ್ಪೆನ್ಸ್, ಕ್ರೈಂ, ಲವ್ ಒಳಗೊಂಡಿರುವ ಈ ಚಿತವನ್ನ್ರು ವಿಭಿನ್ನ ಶೈಲಿಯಲ್ಲಿ ನಿರೂಪಣೆ ಮಾಡಲಾಗಿದೆ. ಇದರಲ್ಲಿ ೨೦೦೦ ರೂಪಾಯಿ ನೋಟು ನಾಯಕ ಅಂತ ಹೇಳಬಹುದು. ಚಿತ್ರದ ಮಿಕ್ಕ ಎಲ್ಲ ಪಾತ್ರಗಳು ಈ ನೋಟಿನ ಸುತ್ತ. ಸುಮಾರು ೭೫ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು ಅವರೆಲ್ಲರೂ ರಂಗ ಭೂಮಿ ಹಿನ್ನಲೆ ಉಳ್ಳವರು. ಚಿಕ್ಕಮಗಳೂರು, ಕೆಮ್ಮಣ್ ಗುಂಡಿ ಅರಣ್ಯ ಪ್ರದೇಶಗಳಲ್ಲಿ, ಬೆಂಗಳೂರಿನ ಮಾರುಕಟ್ಟೆ, ಬಾರ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಜ್ಞಾನಪೀಠ ಪ್ರಶಸ್ತಿ ದ ರಾ ಬೇಂದ್ರೆ ಅವರ ‘ಕುರುಡು ಕಾಂಚಾಣ...ಹಾಡನ್ನು ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ಪುತ್ರನ್ ಹಾಡಿದ್ದಾರೆ.

ಎಂ ಕೆ ಜಗದೀಶ್ ಮತ್ತು ಜಿ ಪ್ರೇಮನಾಥ್ ನಿರ್ಮಿಸಿರುವ ಚಿತ್ರಕ್ಕೆ ರತ್ನಾತನಯ ಈ ಚಿತ್ರದ ನಿರ್ದೇಶಕ ಹಾಗೂ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.
ರವಿ ವರ್ಮಾ (ಗಂಗು) ಛಾಯಾಗ್ರಹಣ, ಕೌಶಿಕ್ ಸಂಗೀತ, ಅರ್ಜುನ್ ಕಿತ್ತು ಸಂಕಲನ, ದ ರಾ ಬೇಂದ್ರೆ, ಕೆ ಕಲ್ಯಾಣ್ ಹರೀಶ್ ಕೆ ಗೌಡ ಗೀತ ಸಾಹಿತ್ಯ.ವೀರ ಸಮರ್ಥ ಹಿನ್ನಲೆ ಸಂಗೀತ ಒದಗಿಸಿದ್ದಾರೆ.

ಗೋಪಾಲಕೃಷ್ಣ ದೇಶಪಾಂಡೆ, ಬಾಲ ರಜವಾಡಿ, ಗೌತಮ್, ಜಗದೀಶ್, ಎಂ ಕೆ ಅಕ್ಷತ ಪಾಂಡವಪುರ, ಆದಿತ್ಯ ಶೆಟ್ಟಿ, ಮೇಘ, ಉಷಾ, ರವಿಶಂಕರ್, ಸಿಲ್ಲಿ ಲಲ್ಲಿ ಆನಂದ್, ಜಯರಾಂ ಹಾಗೂ ಇತರರು ತಾರಾಗಣದಲಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆ ಒಂದು ನೋಟು ಸೆನ್ಸಾರ್ ಪಡೆಯಿತು - Chitratara.com
Copyright 2009 chitratara.com Reproduction is forbidden unless authorized. All rights reserved.