ಆಗಸ್ಟ್ 5 ರಂದು ಮುಂಬೈನಲ್ಲಿ``ಮಾರ್ಟಿನ್``ಪ್ಯಾನ್ ವಲ್ಡ್ ಟ್ರೈಲರ್ ಬಿಡುಗಡೆ
Posted date: 31 Wed, Jul 2024 05:56:01 PM
ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ ಪ್ಯಾನ್ ವಲ್ಡ್   ಸಿನಿಮಾ " ಮಾರ್ಟಿನ್ ". ಚಿತ್ರದ ತಾರಾಗಣ, ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳಿಂದ "ಮಾರ್ಟಿನ್"  ಕನ್ನಡ‌ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ವಿವಿಧ ಭಾಷೆಯ ಚಿತ್ರರಂಗ ಜೊತೆ ಜಗತ್ತಿನ ಬೇರೆ ಬೇರೆ ಭಾಷೆಯ ಜನರ‌ ಗಮನ ಸೆಳೆದಿದೆ.

ಆಕ್ಷನ್ ಪ್ರಿನ್ಸ್ ದೃವ ಸರ್ಜಾ ಮತ್ತು ಎಪಿ ಅರ್ಜುನ್ ಕಾಂಬಿನೇಷನ್ ನ ಈ ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹಾಕಿದ್ದಾರೆ. ಸಿನಿಮಾದ ತಾರಾಗಣ, ಅದ್ದೂರಿ ವೆಚ್ಚ, ಮೇಕಿಂಗ್ ಸೇರಿದಂತೆ ವಿವಿಧ ವಿಷಯಗಳಿಗೆ ಸುದ್ದಿಯಾಗುತ್ತಿರು ನಡುವೆಯೇ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ನಡುವಿನ ಮುಸುಕಿನ ಗುದ್ದಾಟದಿಂದಲೂ ಚಿತ್ರ ಸದ್ದು ಮಾಡುತ್ತಲೇ ಇದೆ.

ಪ್ಯಾನ್ ಇಂಡಿಯಾ ‌ಮಟ್ಟದಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿರುವ ಕಾಲಘಟ್ಡದಲ್ಲಿ ಕನ್ನಡ ಸಿನಿಮಾ ಯಾವುದಕ್ಕೂ ಹಿಂದೆ ಇಲ್ಲ ಎನ್ನುವುದನ್ನು ನಿರೂಪಿಸಲು ಪ್ಯಾನ್ ಮಟ್ಟದಲ್ಲಿ " ಮಾರ್ಟಿನ್ " ಚಿತ್ರದ ಟ್ರೈಲರ್ ಬಿಡುಗಡೆ ಆಗಸ್ಟ್ 5 ರಂದು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಂಡಿದ್ದು ಭಾರತೀಯ ಭಾಷೆಯ ವಿವಿಧ ಚಿತ್ರರಂಗದ ಪತ್ರಕರ್ತರೂ ಸೇರಿದಂತೆ ಸುಮಾರು‌ 21 ದೇಶಗಳ ಪತ್ರಕರ್ತರ ಮುಂದೆ " ಮಾರ್ಟಿನ್ " ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದು ಕನ್ನಡ ಚಿತ್ರದಲ್ಲಿ ಹೊಸ ದಾಖಲೆ ಅಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲಿ ಹೊಸ‌ ಮುನ್ನುಡಿ ಬರೆದಿದೆ

ಪ್ಯಾನ್ ವರ್ಲ್ಡ್ ಟ್ರೈಲರ್ ಬಿಡುಗಡೆಗೂ ಮುನ್ನ ಆಗಸ್ಟ್ 4 ರಂದು  ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಕನ್ನಡದ ಅಭಿಮಾನಿಗಳಿಗಾಗಿ ಟ್ರೈಲರ್ ಬಿಡುಗಡೆಯಾಗಲಿದ್ದು ಇದಕ್ಕಾಗಿ ಟಿಕಟ್ ಕೂಡ ನಿಗಧಿ ಮಾಡಲಾಗಿದೆ. 

 "ಮಾರ್ಟಿನ್ " ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ತಂಡ ಮಾಹಿತಿ ಹಂಚಿಕೊಂಡಿತು.

ನಟ ದೃವ ಸರ್ಜಾ ಮಾತನಾಡಿ ಚಿತ್ರವನ್ನು ಪ್ರತಿಯೊಂದು 
ದೇಶಕ್ಕೂ ತಲುಪಿಸಬೇಕು ಎನ್ನುವ ಉದ್ದೇಶದಿಂದ  ಆಗಸ್ಟ್ 5ರಂದು ಮುಂಬೈನಲ್ಲಿ ಪ್ಯಾನ್ ವಲ್ಡ್ ಟ್ರೈಲರ್ ಬಿಡುಗಡೆ ಹಮ್ಮಿಕೊಳ್ಳಲಾಗಿದೆ. ವಿಶ್ವದಾದ್ಯಂತ 21 ದೇಶಗಳ ಪತ್ರಕರ್ತರು ಭಾಗಮಿಸಲಿದ್ದು  ಭಾರತದ ಫಸ್ಟ್ ಇಂಟರ್‌ನ್ಯಾಷನಲ್ ಪ್ರೆಸ್ ಮೀಟ್ ಇದಾಗಲಿದೆ, ಈಜಿಪ್ಟ್, ದುಬೈ, ಇಂಡೋನೇಶಿಯಾ, ಯುಕೆ, ಇಂಗ್ಲೆಂಡ್, ಜಪಾನ್, ಕೊರಿಯಾ," ಮಲೇಶಿಯಾ ಹೀಗೆ 21 ದೇಶಗಳಿಂದ  ಪತ್ರಕರ್ತರು ಆಗಮಿಸಲಿದ್ದಾರೆ.ಎಲ್ಲಾ ಕಡೆಗೂ ತಲುಪಬೇಕು ಎನ್ನುವುದು ನಮ್ಮ ಉದ್ದೇಶ.. ಇದೆಲ್ಲದಕ್ಕೂ ಕನ್ನಡಿಗರಿಗಾಗಿ ಆಗಸ್ಟ್ 4ರಂದು ವೀರೇಶ ಚಿತ್ರಮಂದಿರದಲ್ಲಿ  ಟ್ರೈಲರ್ ಬಿಡುಗಡೆ ಹಮ್ಮಿಕೊಳ್ಳಲಾಗಿದೆ ಎಂದರು

ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿ ಚಿತ್ರವನ್ನು ಚೈನೀಸ್, ಜಪಾನ್  ಭಾಷೆಯಲ್ಲಿ ‌ಬಿಡುಗಡೆ ಮಾಡಲು  ಹಲವು ತಿಂಗಳ ಹಿಂದೆಯೇ  ಬೇಡಿಕೆ ಬಂದಿದೆ. ಆಗಸ್ಟ್ 5ರಂದು ಮುಂಬೈಲ್ಲಿ ಟ್ರೈಲರ್ ಬಿಡುಗಡೆ ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಸೆನ್ಸಾ‌ರ್ ಮಾಡಿಸಿಕೊಳ್ಳಲು ಸಮಮ ಸಿಗಲಿದೆ. ಎಲ್ಲಾ ಭಾಷೆಗಳಲ್ಲಿ ಅಕ್ಟೋಬರ್ 11ರಂದು ಚಿತ್ರವನ್ನು ಬಿಡುಗಡೆ  ಮಾಡುವ ಪ್ರಯತ್ನ ನಡೆಸಿದ್ದೇವೆ ಎಂದರು

ಇನ್ನು ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಅಲ್ಲದೆ ಬೆಂಗಾಳಿ ಭಾಷೆಯಲ್ಲೂ ಚಿತ್ರ ಬಿಡುಗಡೆ ಮಾಡುತ್ತೇವೆ. ಬಾಂಗ್ಲಾ ದೇಶದಲ್ಲಿ ಭಾರತೀಯ ಸಿನಿಮಾಗಳಿಗೆ ತುಂಬಾ ಬೇಡಿಕೆಯಿದೆ, ಇದೊಂದು ಪಕ್ಕಾ ಆಕ್ಷನ್ ಡ್ರಾಮಾ ಎಂಟರ್ ಟೈನರ್ ಚಿತ್ರ ಆಗಿರುವುದರಿಂದ ಪ್ರಪಂಚದ ಯಾವ ಭಾಷೆಯಲ್ಲಿ ಬಿಡುಗಡೆ  ಮಾಡಿದರೂ ಅನ್ವಯಿಸುತ್ತದೆ, ಅದನ್ನೆಲ್ಲ ಯೋಚಿಸಿಯೇ  ಈ ನಿರ್ಧಾರ ಕೈಗೊಂಡಿದ್ದೇವೆ, ಈ ಮೂಲಕ ಕನ್ನಡ ಭಾಷೆಯ ಚಿತ್ರವನ್ನು ವಿಶ್ವದೆಲ್ಲೆಡೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು

ನಿರ್ದೇಶಕ ಎ.ಪಿ. ಅರ್ಜುನ್ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ
ಬಂದಿದೆ. ಅದಕ್ಕಾಗೇ 3 ವರ್ಷಗಳ ಕಾಲ ನಾವೆಲ್ಲ ಸೇರಿ ಎಫರ್ಟ್ ಹಾಕಿದ್ದೇವೆ,ಮುಂಬೈನಲ್ಲಿ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ನಡೆಯಲಿರುವ ಮಾರ್ಟಿನ್ ಟ್ರೈಲರ್ ಬಿಡುಗಡೆ ಮಾಡಲಿದ್ದೇವೆ.  ಇದು  ದೇಶದಲೇ ಮೊದಲು  ಎಂದು ಹೇಳಿದರು

ಚಿತ್ರಕ್ಕೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಚಿತ್ರದ ಟೀಸ‌ರ್ ನೋಡಿದಾಗ ಕಥೆಯ ಬಗ್ಗೆ ಸಣ್ಣ ಸುಳಿವು ಸಿಕ್ಕಿತ್ತು. ಪಾಕಿಸ್ತಾನದ ಜೈಲಿನಿಂದ ಮಾರ್ಟಿನ್ ಟೀಸರ್ ಆರಂಭವಾಗುತ್ತದೆ. ನಾಯಕ ಮಾರ್ಟಿನ್ ಏಕೆ ಪಾಕಿಸ್ತಾನದ ಜೈಲಿಗೆ ಹೋದ, ಪಾಕಿಸ್ತಾನಕ್ಕೂ ಈ ಕಥೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡಿದೆ. ಅಕ್ಟೋಬರ್ 11ರಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಮಾರ್ಟಿನ್ ಪ್ರೇಕ್ಷಕರನ್ನು ಸೀಟಿನ ತುತ್ತ ತುದಿಗೆ ತಂದು ಕೂರಿಸುವ ಆಕ್ಷನ್ ಡ್ರಿಲ್ಲರ್ ಸಿನಿಮಾ.ಇದಾಗಿದೆ.

ಮಾರ್ಟಿನ್ ಚಿತ್ರಕ್ಕಾಗಿ 18 ರಿಂದ 20 ದುಬಾರಿ ವೆಚ್ಚದ ಸೆಟ್ ಹಾಕಿ ಸುಮಾರು 240 ದಿನಗಳ‌ ಕಾಲ ಚಿತ್ರೀಕರಣ ಮಾಡಿರುವುದು ಕೂಡ ಮಾರ್ಟಿನ್ ಚಿತ್ರದ ವಿಶೇಷ.

ನಾಯಕಿ ವೈಭವಿ ಶಾಂಡಿಲ್ಯ ಮಾತನಾಡಿ ಇಂಥ ದೊಡ್ಡ ಚಿತ್ರದ
ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ನಾನು ಸಹ ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.

ವೈಭವಿ ಶಾಂಡಿಲ್ಯ  ಸುಕೃತಾ ವಾಗ್ಲೆ, ಅನ್ವೇಶಿ ಜೈನ್, ಚಿಕ್ಕಣ್ಣ, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನವಾಬ್ ಶಾ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಸತ್ಯ ಹೆಗಡೆ  ಛಾಯಾಗ್ರಹಣ ಹಾಗೂ ರವಿ ಬಸೂರು  ಹಿನ್ನೆಲೆ ಸಂಗೀತ, ಮಣಿಶರ್ಮ ಹಾಡುಗಳಿಗೆ ಸಂಗೀತವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed