ಆನ್ ಲೈನ್ ಗೇಮ್ ಕುರಿತಾದ ಚಿತ್ರ ರಮ್ಮಿ ಆಟ
Posted date: 01 Sun, Sep 2024 09:53:01 AM
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್, ಇಂಟರ್ ನೆಟ್ ಇರುತ್ತದೆ. ಇದರಲ್ಲಿ ಮನರಂಜನೆಗಾಗಿ ಆಡುವ  ಆನ್ ಲೈನ್ ಗೇಮ್ ಕೆಲವರ ಜೀವನವನ್ನೇ ಸರ್ವನಾಶ ಮಾಡುತ್ತಿದೆ. ರಮ್ಮಿ ಆಟ ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ಇದಕ್ಕೆ ಒಮ್ಮೆ ಅಡಿಕ್ಟ್ ಆದಮೇಲೆ ಅದನ್ನು ಬಿಡಲು ಸಾಧ್ಯವೇ ಆಗದು. ಈ ಆಟ ಆಡುವುದರಿಂದ ಕೆಲವೊಮ್ಮೆ ತುಂಬಾ ಲಾಭ ಆಗಬಹುದು. ಜೊತೆಗೆ ಕೆಟ್ಟದ್ದೂ ಆಗಬಹುದು. ಈ ಆಟಕ್ಕೆ ಸರಕಾರವೇ ಅನುಮತಿ ನೀಡಿದೆ. ಸೆಲಬ್ರಟಿಗಳು ಇದರ ಜಾಹೀರಾತು ಮಾಡುವುದರಿಂದ ಅಭಿಮಾನಿಗಳೂ ಅದನ್ನೇ ಅನುಸರಿಸುತ್ತಾರೆ. ಈಗಿನ‌ ಕಾಲದಲ್ಲಿ ಆನ್ ಲೈನ್ 
 
ರಮ್ಮಿ ಆಡುವುದರಿಂದ ಏನೆಲ್ಲ ತೊಂದರೆಗಳಾಗುತ್ತವೆ, ಜನ ಯಾವ ರೀತಿ ಮೋಸ ಹೋಗುತ್ತಾರೆ. ಈ ಆಟದಿಂದ ಏನೆಲ್ಲ‌
ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು "ರಮ್ಮಿ ಆಟ" ಎಂಬ ಚಿತ್ರಕ್ಕೆ ಉಮರ್ ಷರೀಫ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರೊಂದಿಗೆ ಚಿತ್ರದ ನಿರ್ಮಾಣ ಸಹ ಮಾಡಿದ್ದಾರೆ. ಒಂದಷ್ಟು ಡ್ರಾಮಾ ಕಥೆ ಬರೆದು ನಿರ್ದೇಶನ ಮಾಡಿರುವ ಉಮರ್ ಪರೀಫ್ ಅವರ ನಿರ್ದೇಶನದ ಮೊದಲ ಚಿತ್ರವಿದು.
 
ಈಗಾಗಲೇ ತನ್ನ ಶೂಟಿಂಗ್, ಪೋಸ್ಟ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ  ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ  `ಯು` ಸರ್ಟಿಫಿಕೇಟ್ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರವನ್ನು  ರಿಲೀಸ್ ಮಾಡುವ ಸಿದ್ದತೆ ನಡೆದಿದ್ದು, ನೆರಳು ಮೀಡಿಯಾ ಥ್ರೂ ಲಿಖಿತ್ ಫಿಲಂಸ್ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.
 
ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಪ್ರಶಂಸೆ ಸಹ ಪಡೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರ ನಡೆಸಲಾಗಿದೆ.
 
ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಉಮರ್ ಅವರ ಸಂಭಾಷಣೆ, ಅಮೀರ್ ಅವರ ಸಾಹಸ, ಪ್ರಭು ಎಸ್.ಆರ್. ಅವರ ಸಂಗೀತ, ಗಣೇಶ್, ಮಾಧುರಿ, ಉಮರ್ ಷರೀಫ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. 
 
ನ್ಯೂಸದ ಚಾನೆಲ್ ನಲ್ಲಿ ಕೆಲಸ ಮಾಡಿರುವ ರಾಘವ ಸೂರ್ಯ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿನ್ಯಾ ಶೆಟ್ಟಿ, ಸ್ನೇಹರಾವ್, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ನೋಹನ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed