ಇದೇ ತಿಂಗಳಲ್ಲಿ `ಕುಲ್ಫೀ`
Posted date: 14 Thu, Jun 2018 09:35:05 AM

ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕುಲ್ಫೀ‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ವಿಭಿನ್ನ ಕಥಾ ಹಂದರ ಹೊಂದಿರುವ ಈ ಹಾರಾರ್ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ‘ಕುಲ್ಫೀ‘ ಅವರ ನಿರ್ದೆಶನದ ಚೊಚ್ಚಲ ಚಿತ್ರ.
ನರಸಿಂಹ ಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಭಿಷೇಕ್ ಸಂಗೀತ ನೀಡಿದ್ದಾರೆ. ಶಿವಪ್ರಸಾದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ಚಂದ್ರಪ್ಪ ನಿರ್ಮಾಣ ನಿರ್ವಹಣೆ  ಹಾಗೂ ಸೀನು ಅವರ ಕಲಾ ನಿರ್ದೆಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿನೋಲ್, ಲಾರೆರ್ಸ್, ಗಿರೀಶ್, ದಿಲೀಪ್, ರಮೇಶ್ ಭಟ್, ಹರ್ಷಿತ ಗೌಡ(ತರ‍್ಲೆ ವಿಲೇಜ್) ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇದೇ ತಿಂಗಳಲ್ಲಿ `ಕುಲ್ಫೀ` - Chitratara.com
Copyright 2009 chitratara.com Reproduction is forbidden unless authorized. All rights reserved.