ಇರುವುದೆಲ್ಲವ ಬಿಟ್ಟು ಯು ಸರ್ಟಿಫಿಕೆಟ್
Posted date: 10 Mon, Sep 2018 10:41:57 AM

ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣದ  ಇರುವುದೆಲ್ಲವ ಬಿಟ್ಟು ಚಿತ್ರಕ್ಕೆ  ಕಳೆದ ವಾರ ಸೆನ್ಸಾರ್‌ಮಂಡಳಿಯು ಚಿತ್ರವೀಕ್ಷಿಸಿ ಮೆಚ್ಚುಕೆ ಗಳಿಸಿ ಯು ಸರ್ಟಿಫಿಕೆಟ್ ನೀಡಿದ್ದಾರೆ. ಮುಂದಿನ ವಾರ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಕಾಂತಕನ್ನಲ್ಲಿ,  ಸಂಭಾಷಣೆ-ಮಹೇಶ್ ಮಳವಳ್ಳಿ, ಛಾಯಾಗ್ರಹಣ - ವಿಲಿಯಂ ಡೇವಿಡ್, ಸಂಗೀತ - ಶ್ರೀಧರ್ ವಿ ಸಂಭ್ರಮ್, ಕಲೆ-ಶ್ರೀನಿವಾಸ್, ನೃತ್ಯ-ಮುರಳಿ ಧನಕುಮಾತ್, ಸಂಕಲನ-ಕೆ.ಎಂ. ಪ್ರಕಾಶ್, ಸಾಹಿತ್ಯ - ಜಯಂತ್ ಕಾಯ್ಕಿಣಿ, ವಿ ನಾಗೇಂದ್ರಪ್ರಸಾದ್, ಕವಿರಾಜ್, ಕಾಂತಕನ್ನಲ್ಲಿ, ರಚಿಸಿದ್ದಾರೆ. ಸಹ ನಿರ್ದೇಶನ ಸೋಮುಗೌಡ, ತಾರಾಗಣದಲ್ಲಿ - ಮೇಘನರಾಜ್, ತಿಲಕ್, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇರುವುದೆಲ್ಲವ ಬಿಟ್ಟು ಯು ಸರ್ಟಿಫಿಕೆಟ್ - Chitratara.com
Copyright 2009 chitratara.com Reproduction is forbidden unless authorized. All rights reserved.