ಈ ವಾರ ತೆರೆಗೆ `ಆರಕ್ಷಕ`
Posted date: 23 Mon, Jan 2012 ? 09:07:29 AM

ಪಿ.ವಾಸು ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ‘ಆರಕ್ಷಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
      ಕೇರಳ, ಮೈಸೂರು, ಚೆನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ‘ಆರಕ್ಷಕನ ಮೂರು ಹಾಡುಗಳು ಇಂಡೋನೇಷಿಯಾದಲ್ಲಿ ಚಿತ್ರೀಕರಣಗೊಂಡಿದೆ.
      ಉದಯರವಿ ಫ಼ಿಲಂಸ್ ಲಾಂಛನದಡಿಯಲ್ಲಿ ಕೃಷ್ಣಪ್ರಜ್ವಲ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತವಿರುವ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಸೀತಾ, ಸದಾ, ರಾಗಿಣಿ, ಶಯಾಜಿ ಶಿಂಧೆ, ಶರಣ್ ಮುಂತಾದವರಿದ್ದಾರೆ.Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ `ಆರಕ್ಷಕ` - Chitratara.com
Copyright 2009 chitratara.com Reproduction is forbidden unless authorized. All rights reserved.