ಉದಯ ಟಿವಿ ಯ ಧಾರಾವಾಹಿ ಕ್ಷಮಾ ಆಗಷ್ಟ್ 5 ರಿಂದ
Posted date: 01 Thu, Aug 2019 02:17:56 PM

ಆಸೆಗೆ ಜಗ್ಗದವಳು, ಸಹನೆಗೆ ಪ್ರತಿರೂಪ ಇವಳು, ನೊಂದರೂ ನಗುವನ್ನೇ ಹಂಚುವವಳು ಕ್ಷಮಾ.ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿರುವ ಕ್ಷಮಾ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಡನಿಲ್ಲದ ಹೆಣ್ಣೊಬ್ಬಳು ಸಮಾಜದಲ್ಲಿ ಹೇಗೆಲ್ಲಾ ಪರಿಪಾಟಲುಗಳನ್ನು ಅನುಭವಿಸುತ್ತಾಳೆ ತನ್ನ ಮಕ್ಕಳನ್ನು ಬೆಳೆಸಲು ಎಷ್ಟೆಲ್ಲ ತ್ಯಾಗಗಳನ್ನು ಮಾಡುತ್ತಾಳೆ ಎನ್ನುಕಥಾಹಂದರವನ್ನು ಹೊಂದಿರುವಧಾರಾವಾಹಿ ಕ್ಷಮಾ. ಈ ಧಾರಾವಾಹಿ ಉದಯಟಿವಿಯಲ್ಲಿಗಂಟೆಗೆ ಪ್ರಸಾರವಾಗುತ್ತಿದ್ದು ಈಗ ಸಮಯ ಬದಲಾಗಿದೆ ಅಂದರೆ ಇದೇ ಆಗಸ್ಟ್ 5 ರಿಂದ 8 ಗಂಟೆಯ ಬದಲಾಗಿ 9.30 ಕ್ಕೆ ಪ್ರಸಾರವಾಗುತ್ತದೆ. ಬಿ.ಸುರೇಶ್ ಬರವಣಿಗೆಯಲ್ಲಿ ಮೂಡಿಬರುತ್ತಿರುವಕ್ಷಮಾ ಹೆಣ್ಣುಮಕ್ಕಳ ಫೇವರೇಟ್ ಸೀರಿಯಲ್. 9.30 ಕ್ಕೆ ಎಲ್ಲರೂ ಮನೆಗೆ ಬಂದು ಊಟ ಮಾಡುವ ಸಮಯ ಹಾಗಾಗಿ ಇನ್ನು ಹೆಚ್ಚು ಜನರನ್ನು ಸೆಳಯಲು ನಮಗೆ ಸಿಕ್ಕಿರುವ ಸದವಕಾಶಎನ್ನುತ್ತಾರೆಕ್ಷಮಾಧಾರಾವಾಹಿಯಯಜಮಾನಿ ಕಂ ನಿರ್ಮಾಪಕಿ ಶೈಲಜಾ ನಾಗ್. ಆಗಸ್ಟ್ 5 ರಿಂದ ಬದಲಾದ ಸಮಯದಲ್ಲಿ ಬರುತ್ತಿದೆಕ್ಷಮಾ ಸೋಮವಾರದಿಂದ ಶುಕ್ರವಾರರಾತ್ರಿ9.30 ಕ್ಕೆ ನಿಮ್ಮಉದಯಟಿವಿಯಲ್ಲಿ.

ಕ್ಷಮಾ ಆಗಷ್ಟ್ ೫ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 9.30 ಕ್ಕೆ  ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದಯ ಟಿವಿ ಯ ಧಾರಾವಾಹಿ ಕ್ಷಮಾ ಆಗಷ್ಟ್ 5 ರಿಂದ - Chitratara.com
Copyright 2009 chitratara.com Reproduction is forbidden unless authorized. All rights reserved.