ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ ``UI``ಚಿತ್ರದ ``ಸೌಂಡ್ ಆಫ್ ಯುಐ``ಸದ್ದು ಮಾಡುತ್ತಿದೆ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ
Posted date: 25 Sun, Aug 2024 10:27:40 PM
ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ `ಯುಐ` (UI) ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ `ಸೌಂಡ್ ಆಫ್ ಯುಐ` ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್ ಗಳ ಈ ಮ್ಯೂಸಿಕ್ ಝಲಕ್ ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ಹಾಡುಗಳ ಬಗ್ಗೆ ಕುತೂಹಲ ಹೆಚ್ಚಿದೆ.

 "ಯುಐ" ಚಿತ್ರದ ಮ್ಯೂಸಿಕ್ ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್ , ಸಿ.ಆರ್ ಬಾಬಿ ಹಾಗೂ ಉಪೇಂದ್ರ ಅವರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದಿದೆ.  15 ವಯೊಲಿನ್, 8 ಬೇಸ್ ಗಿಟಾರ್, 4 ಕೊಳಲು ಹೀಗೆ ಹಲವು ಇನ್‌ಸ್ಟ್ರುಮೆಂಟ್ಸ್ ಬಳಸಿಕೊಂಡು 90ಕ್ಕೂ ಅಧಿಕ ನುರಿತ ಸಂಗೀತಗಾರರು ಲೈವ್ ನಲ್ಲೇ ಕಾರ್ಯ ನಿರ್ವಹಿಸಿರುವುದು ವಿಶೇಷ. ಚಿತ್ರದಲ್ಲಿ ಬಿಜಿಎಂ ಪ್ರಮುಖಪಾತ್ರ ವಹಿಸಿದೆ. ಹಂಗೇರಿಯಲ್ಲಿ ನಡೆದ ಈ ಮ್ಯೂಸಿಕ್ ಜರ್ನಿಯ ಒಂದು ಝಲಕ್ ಅನ್ನು ಚಿಕ್ಕ ಪ್ರೋಮೊ ಮೂಲಕ "ಸೌಂಡ್ ಆಫ್ ಯುಐ" ಹೆಸರಿನಲ್ಲಿ ಚಿತ್ರತಂಡ ರಿಲೀಸ್ ಮಾಡಿದೆ.

ಹಲವು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶಿಸಿರುವ "ಯುಐ" ಚಿತ್ರವನ್ನು ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು),  ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷೆಯಿರುವ `ಯುಐ` ಚಿತ್ರ ವಿಶ್ವದಾದ್ಯಂತ ವಿಜಯಪತಾಕೆ ಹಾರಿಸಲಿದೆ.  ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed