ಏಳು ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ಪ್ರೀಮಿಯರ್ ಮಾಡಲಿದೆ
Posted date: 15 Fri, May 2020 02:24:41 PM

ಶಕುಂತಲಾ ದೇವಿ, ಆರ್. ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್‌ನಂತಹ ಶೀರ್ಷಿಕೆಗಳೊಂದಿಗೆ 5  ಭಾರತೀಯ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ವೀಡಿಯೋ ಮೇ ಹಾಗು ಆಗಸ್ಟ್ ತಿಂಗಳ ನಡುವೆ ಪ್ರೀಮಿಯರ್ ಮಾಡಲಿದೆ.

ಪ್ರೈಂ ನೀಡುತ್ತದೆ ಅದ್ಭುತ ಮೌಲ್ಯ, ಇತ್ತೀಚಿನ ಮತ್ತು ಪ್ರತ್ಯೇಕ ಚಲನಚಿತ್ರ, ಟಿವಿ ಕಾರ್ಯಕ್ರಮ, ಸ್ಟಾಂಡಪ್ ಹಾಸ್ಯ, ಅಮೆಜ಼ಾನ್ ಒರಿಜಿನಲ್ಸ್, ಜಾಹೀರಾತು ರಹಿತ ಸಂಗೀತ ಪ್ರೈಂ ಮ್ಯೂಸಿಕ್ ಮೂಲಕ, ಗಳ ಅನಿಯಮಿತ ಸ್ಟ್ರೀಮಿಂಗ್, ಭಾರತದ ಅತಿದೊಡ್ಡ ಪ್ರಮಾಣದ ವಸ್ತುಗಳ ಉಚಿತ ಕ್ಷಿಪ್ರ ಬಟವಾಡೆ, ಉನ್ನತ ಡೀಲ್ ಗಳಿಗೆ ಪ್ರವೇಶ, ಪ್ರೈಂ ರೀಡಿಂಗ್ ನೊಂದಿಗೆ ಅನಿಯಮಿತ ಪುಸ್ತಕಗಳು, ಎಲ್ಲಾ ರೂ. 129 ಪ್ರತಿ ತಿಂಗಳಿಗೆ.

ಭಾರತ, ಮೇ 15, 2020 -ಅಮಿತಾಭ್ ಬಚ್ಚನ್(ಬ್ಲ್ಯಾಕ್, ಪೀಕು) ಮತ್ತು ಆಯುಷ್ಮಾನ್ ಖುರಾನಾ(ಶುಭ್‌ಮಂಗಲ್ ಜ್ಯಾದಾ ಸಾವ್‌ಧಾನ್, ಅಂಧಾಧುನ್) ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೋ ಸಿತಾಬೊದ ಮುಂಬರುತ್ತಿರುವ ಪ್ರೀಮಿಯರ್‌ನ ಘೋಷಣೆಯ ಅನುಸರಣೆಯಲ್ಲಿ, ಅಮೆಜಾನ್ ಪ್ರೈಮ್ ವೀಡಿಯೋ ಇಂದು ಸ್ಟ್ರೀಮಿಂಗ್ ಸೇವೆಯಲ್ಲಿ ನೇರವಾಗಿ ಪ್ರೀಮಿಯರ್ ಮಾಡಲಾಗುವ ಇನ್ನೂ ಆರು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪ್ರೀಮಿಯರ್‌ಅನ್ನು ಘೋಷಿಸಿತು. ಐದು ಭಾರತೀಯ ಭಾಷೆಗಳಾದ್ಯಂತ ಇರುವ ಸೇವೆಗೆ ನೇರವಾದ ಲೈನ್ ಅಪ್ ಅಂಶಗಳಿರುವ ಈ ಹೆಚ್ಚುವರಿ ಬಿಡುಗಡೆಗಳು, ಅನು ಮೆನನ್ ಅವರ ವಿದ್ಯಾಬಾಲನ್(ಡರ್ಟಿ  ಪಿಕ್ಚರ್, ಕಹಾನಿ) ನಟಿಸಿರುವ ಶಕುಂತಲಾ ದೇವಿ; ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್(ಚಂದ್ರಮುಖಿ) ಚಿತ್ರಗಳ ಜೊತೆಗೆ, ಕೀರ್ತಿ ಸುರೇಶ್ (ಮಹಾನಟಿ) ನಟನೆಯ ಪೆಂಗ್ವಿನ್(ತಮಿಳು ಹಾಗು ತೆಲುಗು), ಸೂಫಿಯುಮ್ ಸುಜಾತೆಯುಮ್(ಮಲಯಾಳಮ್), ಲಾ (ಕನ್ನಡ) ಮತ್ತು ಫ್ರೆಂಚ್ ಬಿರಿಯಾನಿ(ಕನ್ನಡ)ಮುಂತಾದವನ್ನು ಒಳಗೊಂಡಿದೆ. ಈ ಚಲನಚಿತ್ರಗಳು ವಿಶೇಷವಾಗಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಮಾತ್ರ ಮುಂದಿನ ಮೂರು ತಿಂಗಳವರೆಗೆ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ವಿಶ್ವವ್ಯಾಪಿಯಾಗಿ ೨೦೦ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಭ್ಯವಾಗಲಿವೆ.
ಪ್ರೈಮ್ ವೀಡಿಯೋದಲ್ಲಿ ನಾವು ಗ್ರಾಹಕರಿಗೆ ಏನು ಬೇಕು ಎಂಬುದನ್ನು ಆಲಿಸುತ್ತಲಿರುತ್ತೇವೆ ಮತ್ತು ಅಲ್ಲಿಂದ ಹಿಂದಕ್ಕೆ ಕಾರ್ಯನಿರ್ವಹಿಸುವುದರ ಮೇಲೆ ನಂಬಿಕೆ ಇರಿಸಿದ್ದೇವೆ. ಈ ನಂಬಿಕೆಯೇ ನಮ್ಮ ಇತ್ತೀಚಿನ ಕೊಡುಗೆಗಳ ಮೂಲವಾಗಿದೆ. ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ಕಂಟೆಂಟ್ ನಿರ್ದೇಶಕ ಹಾಗು ಮುಖ್ಯಸ್ಥ ವಿಜಯ್ ಸುಬ್ರಮಣ್ಯಮ್. ಕಳೆದ ೨ ವರ್ಷಗಳಿಂದ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವಿವಿಧ ಭಾಷೆಯ ಚಲನಚಿತ್ರಗಳನ್ನು ಕೆಲವೇ ವಾರಗಳೊಳಗೆ ನೋಡುವುದಕ್ಕೆ, ನಮ್ಮ ಗ್ರಾಹಕರಿಗೆ ಪ್ರೈಮ್ ವೀಡಿಯೋ ಆಯ್ಕೆಯ ಗಮ್ಯವಾಗಿದೆ. ನಾವು ಈಗ ಇದನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಭಾರತದ ಏಳು ಅತ್ಯಂತ ನಿರೀಕ್ಷಿತ ಚಲನಚಿತ್ರಗಳು ವಿಶೇಷವಾಗಿ ಪ್ರೈಮ್ ವೀಡಿಯೋದಲ್ಲಿ ಪ್ರೀಮಿಯರ್ ಆಗುತ್ತಲಿದ್ದು ಗ್ರಾಹಕರ ಮನೆಬಾಗಿಲಿಗೆ ಸಿನಿಮೀಯ ಅನುಭವವನ್ನು ತರಲಿದೆ.

ಭಾರತೀಯ ಪ್ರೇಕ್ಷಕರು ಈ ೭ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು ನಮ್ಮ ಗ್ರಾಹಕರಿಗಾಗಿ ಈ ಚಲನಚಿತ್ರಗಳನ್ನು ಈಗ ಅಮೆಜಾನ್ ಪ್ರೈಮ್ ವೀಡಿಯೋ ಪ್ರೀಮಿಯರ್ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಗ್ರಾಹಕರು ಈಗ ತಮ್ಮ ಮನೆಯ ಆರಾಮ ಮತ್ತು ಸುರಕ್ಷತೆಯೊಳಗೆ ಹಾಗು ತಮ್ಮ ಆಯ್ಕೆಯ ಸ್ಕ್ರೀನ್ ಮೇಲೆ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದು. ಭಾರತದಲ್ಲಿ ಆಳವಾಗಿ ಹುದುಗಿರುವ ಪ್ರೈಮ್ ವೀಡಿಯೋ, ೪೦೦೦ ಪಟ್ಟಣಗಳು ಮತ್ತು ನಗರಗಳಲ್ಲಿನ ವೀಕ್ಷಕವೃಂದ, ಮತ್ತು ೨೦೦ಕ್ಕಿಂತ ಹೆಚ್ಚಿನ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತನ್ನ ವಿಶ್ವವ್ಯಾಪಿ ತಲುಪುವಿಕೆಯೊಂದಿಗೆ ಈ ಚಲನಚಿತ್ರಗಳಿಗೆ ದೊಡ್ಡದಾದ ಜಾಗತಿಕ ಬಿಡುಗಡೆಯ ಹೆಜ್ಜೆಗುರುತು ನೀಡಲಿದೆ. ಈ ಉಪಕ್ರಮದ ಬಗ್ಗೆ ನಾವು ನಿಜವಾಗಿಯೂ ಕೌತುಕರಾಗಿದ್ದು ಈ ಕೊಡುಗೆಯೊಂದಿಗೆ ನಮ್ಮ ಪ್ರೈಮ್ ಸದಸ್ಯರನ್ನು ಸಂತೋಷಪಡಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇವೆ. ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ನಿರ್ದೇಶಕ ಹಾಗು ಕಂಟ್ರಿ ಜನರಲ್ ಮ್ಯಾನೇಜರ್, ಗೌರವ್ ಗಾಂಧಿ.

ಅಮೆಜಾನ್ ಪ್ರೈಮ್ ವೀಡಿಯೋದ ಸೇವೆಗೆ ನೇರವಾಗಿ ವೇಳಾಪಟ್ಟಿ

ಪೊನ್‌ಮಗಳ್ ವಂದಾಳ್ (ತಮಿಳು), ಮೇ 29ರಿಂದ, ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಜ್ಯೋತಿಕಾ, ಪಾರ್ಥಿಬನ್, ಭಾಗ್ಯರಾಜ್, ಪ್ರತಾಪ್ ಪೊತೆನ್, ಮತ್ತು ಪಾಂಡಿರಾಜ್ ನಟನೆಯ ಪೊನ್‌ಮಗಳ್ ವಂದಾಳ್, ಕಾನೂನು ವಿಷಯವಿರುವ ಚಿತ್ರ. ಜೆ.ಜೆ. ಫ್ರೆಡರಿಕ್ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ಇದರ ನಿರ್ಮಾಪಕರು.

ಗುಲಾಬೊ ಸಿತಾಬಿ (ಹಿಂದಿ), ಜೂನ್ 12 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಗುಲಾಬೊ ಸಿತಾಬೊ, ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಜಂಜಾಟಗಳನ್ನು ತೋರಿಸುವ ಚಮತ್ಕಾರೀ ಕೌಟುಂಬಿಕ ಹಾಸ್ಯಚಿತ್ರ. ಈ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದು, ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದರೆ, ರಾನ್ನೀ ಲಹಿರಿ ಹಾಗು ಶೀಲ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಲಾ (ಕನ್ನಡ), ಜೂನ್ 26 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್, ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟನೆಯ ಲಾ ಚಿತ್ರದ ಕಥೆಯನ್ನು ರಘು ಸಮರ್ಥ್ ಬರೆದು ನಿರ್ದೇಶಿಸಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಇದರ ನಿರ್ಮಾಪಕರು.

ಪೆಂಗ್ವಿನ್ (ತಮಿಳು ಮತ್ತು ತೆಲುಗು), ಜುಲೈ ೧೭ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್‌ಅನ್ನು ಈಶ್ವರ್ ಕಾರ್ತಿಕ್ ಬರೆದು ನಿರ್ದೇಶಿಸಿದ್ದಾರೆ. ಸ್ಟೋನ್ ಬೆಂಚ್ ಫಿಲಮ್ಸ್ ಹಾಗು ಕಾರ್ತಿಕ್ ಸುಬ್ಬರಾಜ್ ಇದರ ನಿರ್ಮಾಣ ಮಾಡಿದ್ದಾರೆ.
ಫ್ರೆಂಚ್ ಬಿರಿಯಾನಿ (ಕನ್ನಡ), ಜುಲೈ 17 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಫ್ರೆಂಚ್ ಬಿರಿಯಾನಿ ಡ್ಯಾನಿಶ್ ಸೇಟ್, ಸಾಲ್ ಯೂಸುಫ್ ಹಾಗು ಪಿತೋಬಶ್ ಮುಖ್ಯ ನಟನೆಯನ್ನು ಹೊಂದಿದೆ. ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿದ್ದರೆ, ಪನ್ನಗ ಭರಣ ನಿರ್ದೇಶಿಸಿ, ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದಾರೆ.

ಶಕುಂತಲಾದೇವಿ (ಹಿಂದಿ), ಬಿಡುಗಡೆ ದಿನಾಂಕ ಘೋಷಿಸಬೇಕಾಗಿದೆ
ಮುಖ್ಯಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿರುವ ಶಕುಂತಲಾದೇವಿ, ಮಾನವ ಕಂಪ್ಯೂಟರ್ ಎಂದೇ ಸುಪ್ರಸಿದ್ಧವಾದ ಲೇಖಕಿ, ಗಣಿತಜ್ಞೆಯಾದ ಶಕುಂತಲಾದೇವಿಯವರ ಜೀವನ ಕುರಿತಾದ ಕಥೆಯಾಗಿದೆ. ನಯನಿಕಾ ಮೆಹ್ತಾನಿ ಮತ್ತು ಅನು ಮೆನನ್ ಬರೆದಿರುವ ಚಿತ್ರವನ್ನು ಅನುಮೆನನ್ ನಿರ್ದೇಶನ ಕೂಡ ಮಾಡಿದ್ದಾರೆ. ಅಬಂಡನ್ಶಿಯಾ ಎಂಟರ್‌ಟೇನ್ಮೆಂಟ್ ಪ್ರೈ ಲಿ., ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಇದರ ನಿರ್ಮಾತೃಗಳು.

ಸೂಫಿಯುಮ್ ಸುಜಾತೆಯುಮ್( ಮಲಯಾಳಮ್) ಬಿಡುಗಡೆ ದಿನಾಂಕ ಘೋಷಿಸಬೇಕಾಗಿದೆ
ಅದಿತಿ ಹೈದರಿ ರಾವ್ ಮತ್ತು ಜಯಸೂರಿಯ ನಟನೆಯ ಸೂಫಿಯುಮ್ ಸುಜಾತೆಯುಮ್ ಕಥೆಯನ್ನು ನಾರಣಿಪುರ ಶಾನವಾಸ್ ಬರೆದು ನಿರ್ದೇಶಿಸಿದ್ದಾರೆ. ವಿಜಯ್ ಬಾಬು ಅವರ ಫ್ರೈಡೇ ಫಿಲಮ್ ಹೌಸ್ ಇದರ ನಿರ್ಮಾತೃ ಸಂಸ್ಥೆ.

ಈ ಹೊಸ ಬಿಡುಗಡೆಗಳು, ಪ್ರಶಸ್ತಿ ವಿಜೇತ ಅಮೆಜ಼ಾನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜ಼ಾಪುರ, ಫೋರ್ ಮೋರ್ ಶಾಟ್ಸ್ ಪ್ಲೀಸ್!(ಸೀಸನ್1 ಮತ್ತು 2), ಇನ್ಸೈಡ್ ಎಡ್ಜ್, ಮತ್ತು  ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಇರುವ ಪ್ರೈಮ್ ವೀಡಿಯೋ ಕ್ಯಾಟಲಾಗ್‌ನಲ್ಲಿರುವ ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ.

ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ  ಪ್ರೈಮ್ ವೀಡಿಯೋ ಆಪ್‌ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಪ್ರೈಮ್ ವೀಡಿಯೋ ಆಪ್‌ನಲ್ಲಿ ಪ್ರೈಮ್ ಸದಸ್ಯರು ಪಾತಾಲ್ ಲೋಕ್‌ನ ಎಲ್ಲಾ ಎಪಿಸೋಡ್‌ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು. ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು  www.amazon.in/prime  ಗೆ ಭೇಟಿ ನೀಡಿ 30-ದಿನಗಳ ಉಚಿತ ಟ್ರಯಲ್‌ಗೆ ಚಂದಾ ಪಡೆದುಕೊಳ್ಳಬಹುದು.

ಅಮೆಜಾನ್ ಪ್ರೈಮ್ ವೀಡಿಯೋ ಕುರಿತು

ಪ್ರೈಮ್ ವೀಡಿಯೋ, ಒಂದು ಪ್ರೀಮಿಯಮ್ ಸ್ಟ್ರೀಮಿಂಗ್ ಸೇವೆಯಾಗಿದ್ದು ಪ್ರೈಮ್ ಸದಸ್ಯರಿಗೆ ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸೀರೀಸ್, ಸಾವಿರಾರು ಚಲನಚಿತ್ರಗಳು ಮತ್ತು ಟಿವಿ ಶೋಗಳ ಸಂಗ್ರಹಣೆಯನ್ನು ಒದಗಿಸುತ್ತದೆ- ತಾವು ಪ್ರೀತಿಸುವ ಎಲ್ಲವನ್ನೂ ಅವರು ನೋಡುವುದಕ್ಕೆ ಈ ಒಂದು ಸ್ಥಳದಲ್ಲಿ ಆಯ್ಕೆ ಮಾಡಿಕೊಳ್ಳಬಹುದು     PrimeVideo.com   ದಲ್ಲಿ ಹೆಚ್ಚಿಗೆ ತಿಳಿದುಕೊಳ್ಳಿ.  

ಪ್ರೈಮ್ ವೀಡಿಯೋದಲ್ಲಿ ಒಳಗೊಂಡಿರುವುದು:  ಈ ಶೀರ್ಷಿಕೆಗಳು, ಪ್ರೈಮ್ ಸದಸ್ಯತ್ವದ ಭಾಗವಾಗಿ ಅನಿಯಮಿತ ಸ್ಟ್ರೀಮಿಂಗ್‌ಗೆ ಲಭ್ಯವಿರುವ ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್, ಮತ್ತು ಮೇಡ್ ಇನ್ ಹೆವನ್ ಮುಂತಾದ ಭಾರತೀಯ ನಿರ್ಮಾಣದ ಅಮೆಜಾನ್ ಒರಿಜಿನಲ್ ಸೀರೀಸ್‌ನಿಂದ ಹಿಡಿದು ಟಾಮ್ ಕ್ಲೇನ್ಸಿಯವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀ ಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸೆಲ್ ಒಳಗೊಂಡಂತೆ ಜಾಗತಿಕವಾಗಿ ಅತಿಮೆಚ್ಚುಗೆ ಪಡೆದ ಜಾಗತಿಕ  ಅಮೆಜಾನ್  ಒರಿಜಿನಲ್ ಸೀರೀಸ್‌ವರೆಗೆ ಸಾವಿರಾರು ಟಿವಿಶೋಗಳು ಹಾಗು ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರಗಳನ್ನು ಸೇರಿಕೊಳ್ಳುತ್ತದೆ. ಪ್ರೈಮ್ ವೀಡಿಯೋ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಟೈಟಲ್‌ಗಳನ್ನು ಒಳಗೊಂಡಿದೆ.

ತಕ್ಷಣದ ಪ್ರವೇಶಾವಕಾಶs: ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ  ಪ್ರೈಮ್ ವೀಡಿಯೋ ಆಪ್‌ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಏರ್‌ಟೆಲ್ ಮತ್ತು ವೋಡಾಫೋನ್ ಪ್ರೀಪೈಡ್ ಹಾಗು ಪೋಸ್ಟ್‌ಪೈಡ್ ಚಂದಾ ಯೋಜನೆಯ ಮೂಲಕವೂ ಗ್ರಾಹಕರಿಗೆ ಪ್ರೈಮ್ ವೀಡಿಯೋ ಲಭ್ಯವಿದೆ. ಪ್ರೈಮ್ ವೀಡಿಯೋ ಆಪ್‌ನಲ್ಲಿ ಪ್ರೈಮ್ ಸದಸ್ಯರು ಥಪ್ಪಡ್‌ಅನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು.

ವರ್ಧಿತ ಅನುಭವ: ೪ಕೆ ಅಲ್ಟ್ರಾ ಹೆಚ್‌ಡಿ-ಮತ್ತು ಹೈ ಡೈನಮಿಕ್ ರೇಂಜ್(ಹೆಚ್‌ಡಿಆರ್) ಹೊಂದಾಣಿಕೆಯಿರುವ ಕಂಟೆಂಟ್‌ನೊಂದಿಗೆ ಪ್ರತಿ ವೀಕ್ಷಣೆಯ ಲಾಭ ಪಡೆದುಕೊಳ್ಳಿ. Iಒಆb ಶಕ್ತಿಯಿರುವ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಏಳು ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ಪ್ರೀಮಿಯರ್ ಮಾಡಲಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.