ಒಂದೇ ಮಾದರಿಯ ಚಿತ್ರ ನೋಡಿ ಸಾಕಾಗಿದ್ದ ಪ್ರೇಕ್ಷಕರಿಗೆ ``ಪೌಡರ್``ಘಮಲು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಮುದ ನೀಡಿದೆ
Posted date: 23 Fri, Aug 2024 11:16:27 PM
ಚಿತ್ರ : ಪೌಡರ್
ನಿರ್ದೇಶನ : ಜನಾರ್ದನ ಚಿಕ್ಕಣ್ಣ
ನಿರ್ಮಾಣ :  ಕಾರ್ತಿಕ್ ಗೌಡ, ಯೋಗಿ ಜಿ ರಾಜ್
ತಾರಾಗಣ: ದಿಗಂತ್, ಅನಿರುದ್ದ್ ಆಚಾರ್ಯ , ಧನ್ಯ ರಾಮ್ ಕುಮಾರ್ , ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ,ರವಿಶಂಕರ್, ಹುಲಿ ಕಾರ್ತಿಕ್, ಸುಂದರ್ ವೀಣಾ, ನಾಗಭೂಷಣ್ ಮತ್ತಿತತರು
ರೇಟಿಂಗ್ : *  3 / 5 ***

ಕನ್ನಡದಲ್ಲಿ ಇತ್ತೀಚಿಗೆ ವಿಭಿನ್ನ ಜಾನರ್ ನ ಕಥೆಗಳು,ಚಿತ್ರಗಳು ತೆರೆಗೆ ಬರುತ್ತಿವೆ. ಈ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿವೆ. ಅಂತಹ ಮತ್ತೊಂದು ಪ್ರಯತ್ನದ ಚಿತ್ರ " ಪೌಡರ್".

ಒಂದೇ ಮಾದರಿಯ ಚಿತ್ರ ನೋಡಿ ಸಾಕಾಗಿದ್ದ ಕನ್ನಡದ ಪ್ರೇಕ್ಷಕರಿಗೆ  "ಪೌಡರ್" ಘಮಲು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ಮುದ ನೀಡಿದೆ. ಹೊಸ ಪ್ರಯತ್ನದ ಮೂಲಕ ಜನರಿಗೆ ಇಷ್ಟವಾಗಬಹುದಾದ ಕಥಾಹಂದರವನ್ನು ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಸುವಾಸನೆ ಭರಿತ "ಪೌಡರ್"  ಕೇವಲ ಪೌಡರ್  ಅಷ್ಟೇ ಅಲ್ಲ ಅದರಲ್ಲಿ ಬೇರೆನೋ ಇದೆ  ಎನ್ನುವುದನ್ನು ನಿರ್ದೇಶಕರು ಕುತೂಲಕಾರಿ ಕಟ್ಟಿಕೊಟ್ಟಿದ್ದಾರೆ. ಹಾಗಾದರೆ ಆ ಪೌಡರ್ ಏನು ಅದಕ್ಕಾಗಿ ಒಂದಷ್ಟು ಮಂದಿ ಯಾಕಾಗಿ ಹುಡುಕಾಟ ನಡೆಸಿದ್ದಾರೆ ಎನ್ನುವುದು ಕುತೂಹಲದ ಸಂಗತಿ.
 
ಮೈಸೂರಿನ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ಸೂರ್ಯ (ದಿಗಂತ್ )  ಐದಾರು ವರ್ಷದಿಂದ ಪ್ರೀತಿಸಿದ ಹುಡುಗಿ  ನರ್ಸ್ ನಿತ್ಯಾ ( ಧನ್ಯಾ ರಾಮ್ ಕುಮಾರ್ )  ಮೇಲೆ ಅತಿಯಾದ ಪ್ರೀತಿ. ಆಕೆಗೋ ಈತನ ಅಸಡ್ಡೆ, ದುಡ್ಡು ಮಾಡುವ ಗುಣ ಇಲ್ಲದಕ್ಕೆ ಬೇಸರಿಸಿಕೊಂಡವಳು. ರೂಮ್ ಮೆಟ್ ಕರಣ್ ( ಅನಿರುದ್ದ್ ಆಚಾರ್ಯ ) ಮದ್ಯದಂಗಡಿಯಲ್ಲಿ ಕೆಲಸ ಮಾಡುವಾತ‌. ಆತನ ಮಾತು ಕೇಳಿ ನಿತ್ಯಾ ಓಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡ್ತಾನೆ.

ಮತ್ತೊಂದೆಡೆ  ಅಣ್ಣಾಚಿ ( ರಂಗಾಯಣ ರಘು) ಸುಲೇಮಾನ್ ( ಗೋಪಾಲಕೃಷ್ಣ ದೇಶಪಾಂಡೆ) ತಮ್ಮದೇ ಆದ ವ್ಯವಹಾರ ಮಾಡುವರು. ಆ ವ್ಯವಹಾರದಲ್ಲಿ ಅವರಿಬ್ಬರು ಪೈಪೋಟಿ‌. ಈ ನಡುವೆ  ಮೇಕಪ್ ಮಲ್ಲಿಕಾ  (ಶರ್ಮಿಳಾ ಮಾಂಡ್ರೆ) ಮೇಕಪ್ ಮಾಡಿದ್ರೆ ಅವರ ಕಥೆ ಮುಗಿಯಿತು.

ಈ ನಡುವೆ  ಸೂರ್ಯ  ಕೆಲಸ ಮಾಡುವ ಸೂಪರ್ ಮಾರ್ಕೆಟ್ ಗೆ ಚೀನಾದಿಂದ ಅಪಾರ ಪ್ರಮಾಣದ ಪೌಡರ್ ಬರುತ್ತದೆ. ಅದರಲ್ಲಿ ಒಂದಷ್ಟು ಬಾಕ್ಸ್ ಪೌಡರ್ ಅನ್ನು ಅಲ್ಲಿನ ಸಿಬ್ಬಂದಿ ಪ್ರತ್ಯೇಕವಾಗಿ ಎತ್ತಿ ಇಟ್ಟಿರುತ್ತಾರೆ. ಅದನ್ನು ಪಡೆಯಲು ಬಂದಾಗ ಪೌಡರ್ ಕಳ್ಳತನವಾಗಿರುವುದು ಪತ್ತೆ ಯಾಗುತ್ತದೆ.. ಪೌಡರ್ ಮೇಲೆ ಅತಿಯಾದ ವ್ಯಾಮೋಹ ಹೊಂದಿದ ಅಣ್ಣಾಚಿಗೆ ಆಕಾಶ ಕಳಚಿ‌ಬಿದ್ದಂತಾಗುತ್ತದೆ. 

ಪೌಡರ್ ರಹಸ್ಯ ತಿಳಿದ ಸೂರ್ಯ, ನಿತ್ಯ, ಕರಣ್ ಪೌಡರ್ ಶತಾಯ ಗತಾಯ ತನ್ನದಾಗಿಸಿಕೊಂಡು ಜೀವನದಲ್ಲಿ ದೊಡ್ಡಮಟ್ಟಕ್ಕೆ ಬೆಳೆಯಬೇಕು ಎಂದು ಕನಸು ಕಂಡು ಅದಕ್ಕಾಗಿ ಹರಸಾಹಸ ಮಾಡ್ತಾರೆ. ಮತ್ತೊಂದೆಡೆ ತಲುಪಬೇಕಾದರಿಗೆ ತಲುಪದ ಪೌಡರ್ ಕಂಡು ಬೆಚ್ಚಿಬೀಳುವ ‌ಅಣ್ಣಾಚಿ, ಮೇಕಪ್ ಮಲ್ಲಿಕಾ ಹುಡುಕಾಟ ನಡೆಸುತ್ತಾರೆ. 

ಹಾಗಾದರೆ ಆ ಪೌಡರ್ ಯಾವುದು, ಯಾತಕ್ಕಾಗಿ ಅದರ ಹಿಂದೆ ಬಿದ್ದಿದ್ದಾರೆ,, ಮೂರು ಹುಡುಗರ ಕನಸು ಈಡೇರುತ್ತಾ.. ಇಲ್ಲ ಅಣ್ಣಾಚಿ, ಮಲ್ಲಿಕಾ , ಸುಲೇಮಾನ್ ಅವರಲ್ಲಿ ಯಾರಿಗೆ  ಸಿಗುತ್ತೆ  ಎನ್ನುವ ಒಂದಷ್ಟು ಕುತೂಹಲ ಕಾಪಾಡಿಕೊಳ್ಳಲಾಗಿದೆ. ಅದು ಏನು ಎನ್ನುವುದು ಚಿತ್ರದಲ್ಲಿ ನೋಡಿದರೆ ಚೆನ್ನ.

ಚಿತ್ರದಲ್ಲಿ ಬಳಕೆ ಮಾಡಿರುವ ಗ್ರಾಫಿಕ್ ಕೂಡ ಗಮನ ಸೆಳೆದಿದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಜನಾರ್ದನ ಚಿಕ್ಕಣ್ಣ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಸೆನ್ಸಾರ್ ಆದರೂ ಸೆನ್ಸಾರ್ ಆಗಿಲ್ಲವೇನೋ ಎಂಬಂತೆ ಒಂದಷ್ಟು ಪದಗಳು ಎಗ್ಗಿಲ್ಲದೆ ಬಳಕೆಯಾಗುತ್ತಿರುವ ಚಿತ್ರಗಳ ನಡುವೆ "ಪೌಡರ್ " ಚಿತ್ರದಲ್ಲಿ ಸಧಬಿರುಚಿಯ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.ಅದರಲ್ಲಿ ನಿರ್ಮಾಪಕರಾದ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಜೋಡಿ ಯಶಸ್ವು ಕಂಡಿದೆ.

ನಟ ದಿಗಂತ್ ,ಧನ್ಯಾ ರಾಮ್ ಕುಮಾರ್ ಲವಲವಿಕೆಯ ನಟನೆ ಗಮನ ಸೆಳೆದಿದೆ. ಖಡಕ್ ಲುಕ್ ನಲ್ಲಿ ಹಾಗು ಮುಗ್ದೆಯ ಎರಡು ವಿಭಿನ್ನ ಪಾತ್ರಗಳಲ್ಲಿ ಸಿಕ್ಕ ಅವಕಾಶಕ್ಕೆ ಶರ್ಮಿಳಾ‌ ಮಾಂಡ್ರೆ ನ್ಯಾಯ ಒದಗಿಸಿದ್ದಾರೆ.

ಹಿರಿಯ ಕಲಾವಿದರರಾದ ರಂಗಾಯಣ ರಘು ಯಾವುದೇ ಪಾತ್ರ ಮಾಡಿದರೂ ಅದರೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ,ರವಿಶಂಕರ್, ಹುಲಿ ಕಾರ್ತಿಕ್, ಸುಂದರ್ ವೀಣಾ, ನಾಗಭೂಷಣ್ ಸೇರಿದಂತೆ ಮತ್ತಿತರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed