ಒಂದ್ ಕಥೆ ಹೇಳ್ಳಾ ನಾಳೆಯಿಂದ ತೆರೆಗೆ
Posted date: 07 Thu, Mar 2019 12:37:00 PM

ಒಂದ್ ಕಥೆ ಹೇಳ್ಳಾ? ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಐದು ಕಥೆಗಳ ಸಂಕಲನ ಇರುವ ಹಾರರ್ ಚಿತ್ರ ಸಿದ್ದವಾಗಿ ನಾಳೆಯಿಂದ ಬಿಡುಗಡೆ ಆಗುತ್ತಿದೆ. ಪೆಟಾಸ್ ಸಿನಿ ಕೆಫೆ ಅಡಿಯಲ್ಲಿ ಈ ಚಿತ್ರಕ್ಕೆ 23 ವ್ಯಕ್ತಿಗಳು ಹಣ ಹೂಡಿದ್ದಾರೆ. ಇದರಲ್ಲಿ ಕಿರಣ್, ಯೋಗೀಶ್ ಮತ್ತು ವೀರಣ್ಣ ಪ್ರಮುಖ ನಿರ್ಮಾಪಕರುಗಳು.
ಒಂದು ಮುಖ್ಯವಾದ ಕಥೆ ಜೊತೆಗೆ ನಾಲ್ಕು ಕಥೆಗಳ ಲಿಂಕ್ ಅಂತ್ಯದಲ್ಲಿ ಸಿಕ್ಕುವುದು. ಒಂದೊಂದು ಕಥೆ ತಲಾ 20 ನಿಮಿಷ ತೆರೆಯ ಮೇಲೆ ಕಾಣಲಿದೆ.
ಮುಖ್ಯ ಭೂಮಿಕೆಯಲ್ಲಿ ತಾಂಡವ್ ರಾಮ್ (ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿ), ಶಕ್ತಿ ಸೋಮಣ್ಣ, ಪ್ರತೀಕ್, ತಾರಾ, ಪ್ರಿಯಾಂಕ, ಪ್ರಣತಿ, ಕಾರ್ತಿಕ್ ರಾವ್, ರಾಮಕಾಂತ್, ಸೌಮ್ಯ ಅಭಿನಯಿಸಿದ್ದಾರೆ. ಐದು ಪಾತ್ರಗಳ ರೋಡ್ ಟ್ರಿಪ್ ಪ್ರಾರಂಭ ಆಗಿ ಸಕಲೇಶಪುರದ ಹೋಂ ಸ್ತೇ ತಲುಪಿ ಅಲ್ಲಿಂದ ಕುತೂಹಲವನ್ನು ಬಿಚ್ಚಿಕೊಳ್ಳುತ್ತದೆ.
ಗಿರೀಷ್ ಜಿ ಈ ಚಿತ್ರದ ನಿರ್ದೇಶಕರೂ, ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೆಶ್ ಮತ್ತು ಕಾರ್ತಿಕ್ ಸಿ ರಾವ್ ಸಂಗೀತ, ಪ್ರತೀಪ್ ಸಂಕಲನ, ಜಯಂತ್ ವಿನಾಯಕ್ ಕಲಾ ನಿರ್ದೇಶನ, ಯಶಸ್ವಿ ಗಣೇಶ್ ಸಹ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಒಂದ್ ಕಥೆ ಹೇಳ್ಳಾ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.